ಭಾರತದ ಭೇಟಿಯನ್ನು ಯಶಸ್ವಿ ಎಂದ ನೇಪಾಳ ಪ್ರಧಾನಿ

ಇತ್ತೀಚೆಗಷ್ಟೇ ತಾವು ಕೈಗೊಂಡಿದ್ದ ಭಾರತ ಭೇಟಿ ಯಶಸ್ವಿಯಾಗಿದೆ ಎಂದು ನೇಪಾಳ ಪ್ರಧಾನಿ ಷೇರ್‌ ಬಹಾದ್ದೂರ್‌ ದೆವುಬಾ ಹೇಳಿದ್ದಾರೆ.
ಷೇರ್‌ ಬಹಾದ್ದೂರ್‌ ದೆವುಬಾ
ಷೇರ್‌ ಬಹಾದ್ದೂರ್‌ ದೆವುಬಾ
ಕಠ್ಮಂಡು: ಇತ್ತೀಚೆಗಷ್ಟೇ ತಾವು ಕೈಗೊಂಡಿದ್ದ ಭಾರತ ಭೇಟಿ ಯಶಸ್ವಿಯಾಗಿದೆ ಎಂದು ನೇಪಾಳ ಪ್ರಧಾನಿ ಷೇರ್‌ ಬಹಾದ್ದೂರ್‌ ದೆವುಬಾ ಹೇಳಿದ್ದಾರೆ. 
5 ದಿನಗಳ ಭಾರತ ಭೇಟಿಯ ಬಗ್ಗೆ ನೇಪಾಳ ಸಂಸತ್ ನಲ್ಲಿ ಮಾತನಾಡಿ ಮಾಹಿತಿ ನೀಡಿರುವ ಷೇರ್ ಬಹಾದ್ದೂರ್ ದೆವುಬಾ, ಭಾರತ ಪ್ರವಾಸ ಯಶಸ್ವಿಯಾಗಿದ್ದು, ನೇಪಾಳ- ಭಾರತ ಗಡಿ ಪ್ರದೇಶ ಜಲಾವೃತಗೊಂಡಿರುವುದು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಲವು ವಿಷಯಗಳನ್ನು ಚರ್ಚಿಸಲಾಗಿದ್ದು, ದ್ವಿಪಕ್ಷೀಯ ಸಂಬಂಧ ಉತ್ತಮಗೊಳಿಸುವ ನಿಟ್ಟಿನಲ್ಲಿ ಈ ಭೇಟಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ. 
ಇದೇ ವೇಳೆ 5,000 ಮೆಘಾವ್ಯಾಟ್ ವಿದ್ಯುತ್ ಉತ್ಪಾದನೆಯ ಪಂಚೇಶ್ವರ್ ಮಲ್ಟಿಪರ್ಪಸ್ ಯೋಜನೆಯನ್ನು ಪೂರ್ಣಗೊಳಿಸುವ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿರುವುದಾಗಿ  ಪ್ರಧಾನಿ ಷೇರ್‌ ಬಹಾದ್ದೂರ್‌ ದೆವುಬಾ ನೇಪಾಳ ಸಂಸತ್ ಗೆ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com