ಜುಲೈ ತಿಂಗಳಲ್ಲಿ 92,283 ಕೋಟಿ ಜಿಎಸ್ ಟಿ ಸಂಗ್ರಹ: ಅರುಣ್ ಜೇಟ್ಲಿ

ಭಾರತದ ಮೊದಲ ಜಿಎಸ್ ಟಿ ಸಂಗ್ರಹ ಬರೊಬ್ಬರಿ 92,283 ಕೋಟಿ ರೂಪಾಯಿಯಷ್ಟಾಗಿದ್ದು, ನಿಗದಿತ ಗುರಿಯನ್ನೂ ಮೀರಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವಾಗಿದೆ ಎಂದು ವಿತ್ತ ಅರುಣ್ ಜೇಟ್ಲಿ ಹೇಳಿದ್ದಾರೆ.
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
ನವದೆಹಲಿ: ಭಾರತದ ಮೊದಲ ಜಿಎಸ್ ಟಿ ಸಂಗ್ರಹ ಬರೊಬ್ಬರಿ 92,283 ಕೋಟಿ ರೂಪಾಯಿಯಷ್ಟಾಗಿದ್ದು, ನಿಗದಿತ ಗುರಿಯನ್ನೂ ಮೀರಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವಾಗಿದೆ ಎಂದು ವಿತ್ತ ಅರುಣ್ ಜೇಟ್ಲಿ ಹೇಳಿದ್ದಾರೆ. 
ಈಗಿನವರೆಗೂ ಶೇ.64.4 (59.57) ಲಕ್ಷದಷ್ಟು ತೆರಿಗೆದಾರರು ಜಿಎಸ್ ಟಿ ಗೆ ನೋಂದಣಿ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. ಸಂಗ್ರಹವಾಗಿರುವ ತೆರಿಗೆಯ ಪೈಕಿ 14,894 ಕೋಟಿ ಸಿಜಿಎಸ್ ಟಿಯಿಂದ, 22,722 ಕೋಟಿ ರೂಪಾಯಿ ಸ್ಟೇಟ್ ಜಿಎಸ್ ಟಿಯಿಂದ 47,469 ಕೋಟಿ ರೂಪಾಯಿ ಇಂಟಿಗ್ರೇಟೆಡ್ ಜಿಎಸ್ ಟಿಯಿಂದ ಬಂದಿದೆ ಎಂದು ಅರುಣ್ ಜೇಟ್ಲಿ ಮಾಹಿತಿ ನೀಡಿದ್ದಾರೆ. 
ಐಜಿಎಸ್ ಟಿಯಲ್ಲಿ 20,964 ಕೋಟಿ ರೂಪಾಯಿ ಆಮದಿಗೆ ಸಂಬಂಧಿಸಿದ್ದಾಗಿದ್ದು, 7,198 ಕೋಟಿ ಡೆಮೆರಿಟ್ ಸರಕುಗಳ ಮೇಲೆ ವಿಧಿಸಲಾಗಿದ್ದ ಸೆಸ್ ನಿಂದ ಬಂದಿದೆ, ಈಗಾಗಲೇ ನಾವು ನಿಗದಿತ ಗುರಿಯನ್ನೂ ಮೀರಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಎಂದು ಅರುಣ್ ಜೇಟ್ಲಿ ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com