ಮಹಾರಾಷ್ಟ್ರ: ಹಳಿ ತಪ್ಪಿದ ನಾಗ್ಪುರ-ಮುಂಬೈ ಡುರೊಂಟೊ ಎಕ್ಸ್ ಪ್ರೆಸ್ ರೈಲಿನ 5 ಬೋಗಿಗಳು, ಎಂಜಿನ್

ನಾಗ್ಪುರ-ಮುಂಬೈ ತುರಂತೊ ಎಕ್ಸ್ ಪ್ರೆಸ್ ರೈಲಿನ 5 ಬೋಗಿಗಳು ಮತ್ತು ಎಂಜಿನ್ ಗಳು ಇಂದು....
ಹಳಿ ತಪ್ಪಿದ ರೈಲಿನಿಂದ ಆತಂಕಕೊಂಡು ಇಳಿದ ಪ್ರಯಾಣಿಕರು, ಎಡಚಿತ್ರದಲ್ಲಿ ಪ್ರಯಾಣಿಕರ ರಕ್ಷಣಾ ಕಾರ್ಯ
ಹಳಿ ತಪ್ಪಿದ ರೈಲಿನಿಂದ ಆತಂಕಕೊಂಡು ಇಳಿದ ಪ್ರಯಾಣಿಕರು, ಎಡಚಿತ್ರದಲ್ಲಿ ಪ್ರಯಾಣಿಕರ ರಕ್ಷಣಾ ಕಾರ್ಯ
ಮಹಾರಾಷ್ಟ್ರ: ನಾಗ್ಪುರ-ಮುಂಬೈ ತುರಂತೊ ಎಕ್ಸ್ ಪ್ರೆಸ್ ರೈಲಿನ 5 ಬೋಗಿಗಳು ಮತ್ತು ಎಂಜಿನ್ ಗಳು ಇಂದು ಮುಂಜಾನೆ ತಿತ್ವಾಲ ಸಮೀಪ ಹಳಿತಪ್ಪಿದೆ. ಅಪಘಾತದಲ್ಲಿ ಐವರಿಗೆ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಕಳೆದ 10 ದಿನಗಳಲ್ಲಿ ರೈಲು ಅಪಘಾತಕ್ಕೀಡಾಗುವ ನಾಲ್ಕನೇ ಘಟನೆಯಿದು.
ಪ್ರಸ್ತುತ ರಕ್ಷಣಾ ಕಾರ್ಯ ನಡೆಯುತ್ತಿದೆ. ಅಲ್ಲಿ ತೀವ್ರ ಮಳೆಯ ಕಾರಣದಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯುಂಟಾಗಿದೆ. ಹತ್ತಿರದ ಕಲ್ಯಾಣ ನಗರದಿಂದ ರಕ್ಷಣಾ ತಂಡ ಮತ್ತು ಆಂಬ್ಯುಲೆನ್ಸ್ ಸ್ಥಳಕ್ಕೆ ತಕ್ಷಣವೇ ಧಾವಿಸಿದೆ.
ಇಂದು ಬೆಳಗ್ಗೆ 6.35ರ ಸುಮಾರಿಗೆ ರೈಲು ಹಳಿ ತಪ್ಪಿದೆ. ತೀವ್ರ ಮಳೆಯಿಂದ ಭೂಕುಸಿತ ಉಂಟಾಗಿ  ರೈಲ್ವೆ ಹಳಿ ತಪ್ಪಿದೆ ಎನ್ನಲಾಗುತ್ತಿದೆ. ಅಧಿಕಾರಿಗಳು ಘಟನೆ ಕುರಿತು ಇನ್ನಷ್ಟೇ ಮಾಹಿತಿ ನೀಡಬೇಕಿದೆ.
ಮೊನ್ನೆ 25ರಂದು ಮುಂಬೈಯ ಹಾರ್ಬರ್ ಮಾರ್ಗದಲ್ಲಿ ಮಹಿಮ್ ಗೆ ಸಂಚರಿಸುತ್ತಿದ್ದ ಸ್ಥಳೀಯ  ರೈಲು ಹಳಿ ತಪ್ಪಿ ಅಪಘಾತಕ್ಕೀಡಾಗಿತ್ತು. ಮೊದಲ ನಾಲ್ಕು ಕೋಚ್ ಗಳನ್ನು ರಕ್ಷಿಸಲು ಹೋಗಿ ತಾಂತ್ರಿಕ ದೋಷ ಕಂಡುಬಂದು ರೈಲಿನ ಆರು, ಏಳು, ಎಂಟು ಮತ್ತು ಒಂಭತ್ತನೇ ಬೋಗಿಗಳು ಅಪಘಾತಕ್ಕೀಡಾಗಿದ್ದವು. 

ಸುಮಾರು ಆರು ಮಂದಿ ಸಣ್ಣ ಪುಟ್ಟ ಗಾಯಗಳಾಗಿ ಬಚಾವಾಗಿದ್ದರು. ಭೀಕರ ಪರಿಣಾಮ ಎದುರಾಗಿರಲಿಲ್ಲ.

ಅದಕ್ಕೆ ಎರಡು ದಿನ ಮೊದಲು ದೆಹಲಿಗೆ ತೆರಳುತ್ತಿದ್ದ ಕೈಫತ್ ಎಕ್ಸ್ ಪ್ರೆಸ್ ರೈಲು ಉತ್ತರ ಪ್ರದೇಶದ ಅರುಯ್ಯ್ಯ ಜಿಲ್ಲೆಯಲ್ಲಿ ಹಳಿ ತಪ್ಪಿ ಅಪಘಾತಕ್ಕೀಡಾಗಿ ಸುಮಾರು 81 ಮಂದಿ ಗಾಯಗೊಂಡಿದ್ದರು.

ಆಗಸ್ಟ್ 19ರಂದು ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಕಾಳಿಂಗ ಉತ್ಕಲ್ ಎಕ್ಸ್ ಪ್ರೆಸ್ ರೈಲು ಅಪಘಾತಕ್ಕೀಡಾಗಿ 22 ಮಂದಿ ಮೃತಪಟ್ಟು 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. 
ಪ್ರಯಾಣಿಕರನ್ನು ಅವರ ಸ್ಥಳಗಳಿಗೆ ತಲುಪಿಸಲು ನಾವು ಬಸ್ಸಿನ ಏರ್ಪಾಡು ಮಾಡುತ್ತಿದ್ದೇವೆ. ವೈದ್ಯರು ಮತ್ತು ಹಿರಿಯ ಅಧಿಕಾರಿಗಳು ಈಗಾಗಲೇ ಸ್ಥಳದಲ್ಲಿದ್ದಾರೆ ಎಂದು ಕೇಂದ್ರ ರೈಲ್ವೆ ಟ್ವೀಟ್ ಮಾಡಿದೆ. 

ವಾಸಿಂದ್ ಮತ್ತು ಅಸಂಗೌನ್ ಸ್ಟೇಷನ್ ಹತ್ತಿರ ರೈಲು ಹಳಿ ತಪ್ಪಿದೆ. ರೈಲು ಇಂದು ಬೆಳಗ್ಗೆ 7.55ಕ್ಕೆ ಮುಂಬೈ ತಲುಪಬೇಕಾಗಿತ್ತು.

ಮುಂಬೈ ಮತ್ತು ನಾಗ್ಪುರ ನಡುವೆ ರೈಲು ಸಂಚಾರಕ್ಕೆ ಅಡಚಣೆಯುಂಟಾಗಿದೆ.
ಎದುರಿಗೆ ಭೂ ಕುಸಿತವುಂಟಾಗಿದ್ದು ಕಂಡು ರೈಲಿನ ಚಾಲಕ ತಕ್ಷಣವೇ ಬ್ರೇಕ್ ಹಾಕಿದ್ದರಿಂದ ರೈಲು ಹಳಿ ತಪ್ಪಿರಬಹುದು.

ಕೆಲವರು ಸೀಟಿನಿಂದ ಕೆಳಗೆ ಬಿದ್ದರು. ಕೆಲವು ಬೋಗಿಗಳಲ್ಲ ಸಣ್ಣ ಬೆಂಕಿ ಕಾಣಿಸಿಕೊಂಡಿತು. ಅದನ್ನು ಪ್ರಯಾಣಿಕರು ನಂದಿಸಿದರು ಎಂದು ಪ್ರಯಾಣಿಕರೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com