ಕೊಚ್ಚಿನ್: ಕೇರಳ ಹೈಕೋರ್ಟ್ ಸೋಮವಾರ ಮಲೆಯಾಳಂ ನಟ ದೀಲೀಪ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಈ ವರ್ಷದ ಆರಂಭದಲ್ಲಿ ನಟಿಯೊಬ್ಬರನ್ನು ಮತ್ತು ಅಪಹರಣ ನಡೆಸಿದ ಆರೋಪದ ಮೇಲೆ ನತ ದಿಲೀಪ್ ರನ್ನು ಬಂಧಿಸಲಾಗಿತ್ತು.
ನಟಿ ಅಪಹರಣ ಪ್ರಕರಣದಲ್ಲಿ 11 ನೇ ಆರೋಪಿಯಾಗಿದ್ದ ದಿಲೀಪ್ ಕಳೆದ ವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ಪ್ರಕರಣವು ಒಂದು ಚಿತ್ರದ ಕಥಾವಸ್ತುವಿಗಿಂತ ಹೆಚ್ಚು ನಾಟಕೀಯವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಆದರೆ ನಟ ದಿಲೀಪ್ ಪ್ರಕಾರ ತನ್ನನ್ನು ಸಕ್ರಿಯ ಚಿತ್ರರಂಗದ ಬದುಕಿನಿಂದ ದೂರ ಉಳಿಸಲು ಚಿತ್ರ ಜಗತ್ತಿನ ಕೆಲವು ಪ್ರಭಾವಿಗಳು ಅವರ ವಿರುದ್ದ ಪಿತೂರಿ ನಡೆಸಿೀ ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಾರೆ.
ಈ ಪ್ರಕರಣದಲ್ಲಿ ಪ್ರಥಮ ಆರೋಪಿಯಾಗಿರುವ ಪಲ್ಸರ್ ಸುನಿ ಬಗ್ಗೆ ಪ್ರಶ್ನಿಸಿದಾಗ, ದಿಲೀಪ್ ತಾನೆಂದೂ ಅವನನ್ನು ಭೇಟಿಯಾಗಿಲ್ಲ, ಮಾತನಾಡಿಲ್ಲ ಎಂದು ಪುನರುಚ್ಚರಿಸಿದರು.
ಮಲಯಾಳಂ ಚಿತ್ರೊದ್ಯಮದ ಪ್ರಭಾವಿ ವ್ಯಕ್ತಿಗಳು, ರಾಜಕಾರಣಿಗಳು ಸೇರಿ ಹಲವರು ನಟ ದಿಲೀಪ್ ವಿರುದ್ದ ಈ ಸುಳ್ಳು ಪ್ರಕರಣ ಸೃಷ್ಟಿಸಿದ್ದಾರೆ ಎಂದು ಜಾಮೀನು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಮಲಯಾಳಂ ನಟಿ ಫೆಬ್ರವರಿ 17 ರಂದು ಪುರುಷರ ಗುಂಪಿನಿಂದ ಅಪಹರಣಕ್ಕೆ ಒಳಗಾಗಿದ್ದರು, ಸುನೀಲ್ ಕುಮಾರ್ ಅಲಿಯಾಸ್ 'ಪಲ್ಸರ್' ಸುನಿ ಎಂಬ ಹೆಸರಿನ ವ್ಯಕ್ತಿ ಈ ಅಪಹರಣದ ನೇತೃತ್ವ ವಹಿಸಿದ್ದರು.
ಪೊಲೀಸರು ಸಂಗ್ರಹಿಸಿದ ಪುರಾವೆಯ ಪ್ರಕಾರ, ಪಲ್ಸರ್ ಸುನಿ ಅನ್ನು ಪ್ರಮುಖ ನಟ ದಲೀಪ್ ಈ ಕೆಲಸಕ್ಕೆ ನೇಮಿಸಿಕೊಂಡರು.