ಕಾರುಗಳ ಮೇಲಿನ ಜಿಎಸ್ ಟಿ ಸೆಸ್ ನ್ನು ಶೇ.25 ಕ್ಕೆ ಏರಿಕೆ ಮಾಡಲು ಸಚಿವ ಸಂಪುಟದ ಸುಗ್ರೀವಾಜ್ಞೆ

ಮಧ್ಯಮ ಗಾತ್ರದ ಹಾಗೂ ಎಸ್ ಯುವಿ ಕರುಗಳ ಮೇಲಿನ ಸೆಸ್ ನ್ನು ಏರಿಕೆ ಮಾಡಲು ಕೇಂದ್ರ ಸಚಿವ ಸಂಪುಟ ಸುಗ್ರೀವಾಜ್ಞೆಗೆ ಒಪ್ಪಿಗೆ ಸೂಚಿಸಿದೆ.
ಕಾರುಗಳ ಮೇಲಿನ ಜಿಎಸ್ ಟಿ ಸೆಸ್ ನ್ನು ಶೇ.25 ಕ್ಕೆ ಏರಿಕೆ ಮಾಡಲು ಸಚಿವ ಸಂಪುಟದ ಸುಗ್ರೀವಾಜ್ಞೆ
ನವದೆಹಲಿ: ಮಧ್ಯಮ ಗಾತ್ರದ ಹಾಗೂ ಎಸ್ ಯುವಿ ಕರುಗಳ ಮೇಲಿನ ಸೆಸ್ ನ್ನು ಏರಿಕೆ ಮಾಡಲು ಕೇಂದ್ರ ಸಚಿವ ಸಂಪುಟ ಸುಗ್ರೀವಾಜ್ಞೆಗೆ ಒಪ್ಪಿಗೆ ಸೂಚಿಸಿದೆ. 
ಈಗಿರುವ ಜಿಎಸ್ ಟಿ ವ್ಯವಸ್ಥೆಯಲ್ಲಿ ಶೇ.15 ರಷ್ಟು ಸೆಸ್ ಇದ್ದು, ಇದನ್ನು ಶೇ.25 ಕ್ಕೆ ಏರಿಕೆ ಮಾಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಪ್ರಸ್ತಾವಿತ ಪರಿಷ್ಕೃತ ಸೆಸ್ ದರವನ್ನು ಜಾರಿಗೊಳಿಸಲು ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ ಎಂದು ಕ್ಯಾಬಿನೆಟ್ ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ಲಭ್ಯವಾಗಿದೆ. 
ಆ.5 ರಂದು ಸಭೆ ನಡೆಸಿದ್ದ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಮಧ್ಯಮ ಗಾತ್ರದ ಹಾಗೂ ಎಸ್ ಯುವಿ ಕರುಗಳ ಮೇಲಿನ ಸೆಸ್ ನ್ನು ಏರಿಕೆ ಮಾಡಲು ಒಪ್ಪಿಗೆ ಸೂಚಿಸಲಾಗಿತ್ತು. ಸೆಸ್ ದರವನ್ನು ಏರಿಕೆ ಮಾಡಲು 2017 ರ ಜಿಎಸ್ ಟಿ ಕಾಯ್ದೆಯ ಸೆಕ್ಷನ್ 8 ಕ್ಕೆ ತಿದ್ದುಪಡಿ ತರಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com