ಸಿವಾನ್ ಕೊಲೆ ಪ್ರಕರಣ: ಶಹಾಬುದ್ದೀನ್ ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಪಾಟ್ನಾ ಹೈಕೋರ್ಟ್

2004ರ ಸಿವಾನ್ ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಜೆಡಿ ಮಾಜಿ ಸಂಸದ ಮೊಹಮ್ಮದ್ ಶಹಾಬುದ್ದೀನ್ ಗೆ ವಿಧಿಸಲಾಗಿದ್ದ...
ಮೊಹಮ್ಮದ್ ಶಹಾಬುದ್ದೀನ್
ಮೊಹಮ್ಮದ್ ಶಹಾಬುದ್ದೀನ್
ಪಾಟ್ನಾ: 2004ರ ಸಿವಾನ್ ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಜೆಡಿ ಮಾಜಿ ಸಂಸದ ಮೊಹಮ್ಮದ್ ಶಹಾಬುದ್ದೀನ್ ಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಬುಧವಾರ ಪಾಟ್ನಾ ಹೈಕೋರ್ಟ್ ಎತ್ತಿ ಹಿಡಿದಿದೆ.
13 ವರ್ಷಗಳ ಹಿಂದೆ ಆಸಿಡ್ ಸುರಿದು ರಾಜೀವ್, ಸತೀಶ್ ಮತ್ತು ಗಿರೀಶ್ ಎಂಬ ಸಹೋದರರನ್ನು ಭೀಕರವಾಗಿ ಹತ್ಯೆ ಮಾಡಿದ್ದ ಮೊಹಮ್ಮದ್ ಶಹಾಬುದ್ದೀನ್ ಮತ್ತು ಇತರ ಮೂವರಿಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಆರ್ ಜೆಡಿ ನಾಯಕ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಸೆಷನ್ಸ್ ಕೋರ್ಟ್ ತೀರ್ಪನ್ನು ಎತ್ತಿಹಿಡಿದಿದೆ.
ಇನ್ನು ಬಿಹಾರ ಪತ್ರಕರ್ತ ರಾಜದೇವ್ ರಂಜನ್ ಅವರ ಕೊಲೆ ಪ್ರಕರಣದಲ್ಲೂ ಶಹಾಬುದ್ದೀನ್ 10ನೇ ಆರೋಪಿಯಾಗಿದ್ದು, ಆಗಸ್ಟ್ 22ರಂದು ಆರ್ ಜೆಡಿ ಮಾಜಿ ಸಂಸದನ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com