ಗುರ್ಮೀತ್ ರಾಮ್ ರಹೀಮ್ ಸಿಂಗ್
ದೇಶ
ಅತ್ಯಾಚಾರಿ ರಾಮ್ ರಹೀಮ್ ಸಿಂಗ್ ಗೆ ಪದ್ಮ ಪ್ರಶಸ್ತಿ ನೀಡುವಂತೆ 4,208 ಜನರಿಂದ ಶಿಫಾರಸು!
ಅತ್ಯಾಚಾರಿ ಬಾಬಾ, ಡೇರಾ ಸಚ್ಚಾ ಸೌದ ಮುಖ್ಯಸ್ಥ, ಸ್ವಯಂ ಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಪ್ರತಿಷ್ಠಿತ...
ನವದೆಹಲಿ: ಅತ್ಯಾಚಾರಿ ಬಾಬಾ, ಡೇರಾ ಸಚ್ಚಾ ಸೌದ ಮುಖ್ಯಸ್ಥ, ಸ್ವಯಂ ಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿ ನೀಡುವಂತೆ 4,208ಕ್ಕೂ ಹೆಚ್ಚು ಜನ ಶಿಫಾರಸು ಮಾಡಿದ್ದಲ್ಲದೆ ಸ್ವತಃ ರಾಮ್ ರಹೀಂ ಸಿಂಗ್ ತನಗೆ ಪದ್ಮ ಪ್ರಶಸ್ತಿ ನೀಡುವಂತೆ ಐದು ಬಾರಿ ಶಿಫಾರಸು ಮಾಡಿಕೊಂಡಿದ್ದ ವಿಷಯ ಈಗ ಬಹಿರಂಗವಾಗಿದೆ.
2017ರ ಪದ್ಮ ಪ್ರಶಸ್ತಿಯ ಶಿಫಾರಸು ಅಥವಾ ನಾಮ ನಿರ್ದೇಶನದ ಪಟ್ಟಿಯ ಪ್ರಕಾರ, ಪ್ರತಿಷ್ಠಿತ ಪ್ರಶಸ್ತಿಗಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ಒಟ್ಟು 18,768 ಅರ್ಜಿಗಳು ಬಂದಿವೆ. ಈ ವೈಕಿ ವಿವಾದಾತ್ಮಕ ಬಾಬಾ ರಾಮ್ ರಹೀಮ್ ಸಿಂಗ್ ಗೆ ಅತಿ ಹೆಚ್ಚು 4,208 ಶಿಫಾರಸುಗಳು ಬಂದಿದ್ದು, ಈ ಎಲ್ಲಾ ಶಿಫಾರಸುಗಳು ಹರಿಯಾಣದ ಸಿರ್ಸಾದ ಡೇರಾ ಸಚ್ಚಾ ಸೌದದಿಂದ ಬಂದಿವೆ ಎಂದು ಪಿಟಿಐ ವರದಿ ಮಾಡಿದೆ.
ಸಂತ ಡಾ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ ಪದ್ಮ ಪ್ರಶಸ್ತಿ ನೀಡುವಂತೆ ಅವರ 4,208 ಬೆಂಬಲಿಗರು ಶಿಫಾರಸು ಮಾಡಿದ್ದಾರೆ.
ಕಳೆದ ಸೋಮವಾರ ಅತ್ಯಾಚಾರ ಪ್ರಕರಣದಲ್ಲಿ ಡೇರಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಗೆ ಪಂಚಕುಲ ಸಿಬಿಐ ವಿಶೇಷ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಹಾಗೂ 30 ಲಕ್ಷ ರುಪಾಯಿ ದಂಡ ವಿಧಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ