ನವದೆಹಲಿ: ನೋಟು ಅಮಾನ್ಯೀಕರಣ ಎಂಬುದು ದೊಡ್ಡ ಪ್ಲಾಪ್ ಶೋ ಎಂದು ತೃಣಮೂಲ ಕಾಂಗ್ರೆಸ್ ಮುಖಂಡ ಡೆರೆಕ್ ಒ ಬ್ರೇನ್ ಟೀಕಿಸಿದ್ದಾರೆ.
ಮೋದಿ ಅವರ ನೋಟು ಅಮಾನ್ಯೀಕರಣ ಯೋಜನೆ ಇಂದಿರಾಗಾಂಧಿ ಅವರ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಸಮಾನ ಎಂದು ಹೋಲಿಕೆ ಮಾಡಿದ್ದಾರೆ.
ಸಂತಾನಹರಣ ಯೋಜನೆಯಿಂದಾಗಿ 1977ರ ಚುನಾವಣೆಯಲ್ಲಿ ಇಂದಿರಾಗಾಂಧಿ ಅಧಿಕಾರ ಕಳೆದುಕೊಂಡರು ಅದೇ ರೀತಿ, ನೋಟು ನಿಷೇಧ ಮಾಡಿರುವ ಬಿಜೆಪಿ 2019ರ ಲೋಕಸಭೆ ಚುನಾವಣೆಯಲ್ಲಿ ತನ್ನ ಅಧಿಕಾರ ಕಳೆದು ಕೊಳ್ಳಿಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ನೋಟು ಅಮಾನ್ಯೀಕರಣ ಸಂಪೂರ್ಣವಾಗಿ ವಿಫಲವಾಗಿದೆ. ನೋಟು ನಿಷೇಧಗೊಳಿಸಿದ ಮೊದಲ ದಿನದಿಂದಲೂ ಇಲ್ಲಿಯವರೆಗೂ ಟಿಎಂಸಿ ಮತ್ತು ಮಮತಾ ಬ್ಯಾನರ್ಜಿ ಇದೊಂದು ದೊಡ್ಡ ಪ್ಲಾಪ್ ಶೋ ಎಂದು ಹೇಳುತ್ತಲೇ ಬಂದಿದೆ. 21ನೇ ಶತಮಾನದ ಬಹು ದೊಡ್ಡ ಭ್ರಷ್ಟಾಚಾರ ಹಗರಣವಾಗಿದೆ ಎಂದು ಹೇಳಿದ್ದಾರೆ.
ಜನರನ್ನು ಮೂರ್ಖರನ್ನಾಗಿಸಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ನೋಟು ಅಮಾನ್ಯೀಕರಣದಿಂದಾಗಿ ಜನರಿಗೆ ಹಾಗೂ ದೇಶಕ್ಕೆ ಹಾನಿ ಉಂಟಾಗಿದೆ. ಇದಕ್ಕಾಗಿ ಪಕ್ಷ ಮುಂದಿನ ಚುನಾವಣೆಯಲ್ಲಿ ಬೆಲೆ ತೆರಬೇಕಿದೆ ಎಂದು ತಿಳಿಸಿದ್ದಾರೆ.