ನೂತನ ಕೇಂದ್ರ ಗೃಹ ಕಾರ್ಯದರ್ಶಿಯಾಗಿ ರಾಜೀವ್ ಗೌಬ ನೇಮಕ

ಕೇಂದ್ರ ನಗರ ಅಭಿವೃದ್ಧಿ ಕಾರ್ಯದರ್ಶಿ ರಾಜೀವ್ ಗೌಬ ಅವರು ಕೇಂದ್ರದ ನೂತನ ಗೃಹ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ನೂತನ ಕೇಂದ್ರ ಗೃಹ ಕಾರ್ಯದರ್ಶಿಯಾಗಿ ರಾಜೀವ್ ಗೌಬ ನೇಮಕ
ನೂತನ ಕೇಂದ್ರ ಗೃಹ ಕಾರ್ಯದರ್ಶಿಯಾಗಿ ರಾಜೀವ್ ಗೌಬ ನೇಮಕ
Updated on
ಹೊಸದಿಲ್ಲಿ: ಕೇಂದ್ರ ನಗರ ಅಭಿವೃದ್ಧಿ ಕಾರ್ಯದರ್ಶಿ ರಾಜೀವ್ ಗೌಬ ಅವರು ಕೇಂದ್ರದ ನೂತನ ಗೃಹ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿದೆ.
2017 ರ ಜೂನ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಅಧಿಕಾರಿಗಳ ಅಧಿಕಾರ ಪುನರ್ರಚನೆಯಲ್ಲಿ ತೊಡಗಿದ್ದು, ಗೃಹ ಕಾರ್ಯದರ್ಶಿಯಾಗಿ ರಾಜೀವ್ ಮೆಹರಿಶಿ ಅವರ  ಎರಡು ವರ್ಷಗಳ ಅವಧಿ ಮುಗಿದ  ನಂತರ ಗೌಬ ಅವರನ್ನು ಹೊಸ ಗೃಹ ಕಾರ್ಯದರ್ಶಿಯಾಗಿ ನೇಮಕ ಮಾಡಲು ನಿರ್ಧರಿಸಿದೆ.
ರಾಜೀವ್ ಗೌಬ 1982 ರ ಬ್ಯಾಚ್ ಕೇಡರ್ ಐಎಎಸ್ ಅಧಿಕಾರಿ ಆಗಿದ್ದು   ಗೃಹ ಸಚಿವಾಲಯದಲ್ಲಿ ಇದು ಅವರ ಎರಡನೆ ಅವಧಿಯಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com