ನಾನು 'ನಪುಂಸಕ' ಎಂದ ರಾಮ್ ರಹೀಮ್: ನಿಮ್ಮ ಪುತ್ರಿಯರು ಹೇಗೆ ಜನಿಸಿದರು? ಜಡ್ಜ್ ಪ್ರಶ್ನೆ

ಡೇರಾ ಸಚ್ಚಾ ಸೌದ ಮುಖ್ಯಸ್ಥ, ಸ್ವಯಂ ಘೋಷಿತ ದೇವಮಾನವ ಗುರ್ಮೀತ್‌ ರಾಮ್ ರಹೀಮ್ ಸಿಂಗ್‌ ಕಳೆದ ಸೋಮವಾರ ಅತ್ಯಾಚಾರ ಪ್ರಕರಣದಲ್ಲಿ ಪಂಚಕುಲ...
ರಾಮ್ ರಹೀಂ ಸಿಂಗ್
ರಾಮ್ ರಹೀಂ ಸಿಂಗ್
ನವದೆಹಲಿ: ಡೇರಾ ಸಚ್ಚಾ ಸೌದ ಮುಖ್ಯಸ್ಥ, ಸ್ವಯಂ ಘೋಷಿತ ದೇವಮಾನವ ಗುರ್ಮೀತ್‌ ರಾಮ್ ರಹೀಮ್ ಸಿಂಗ್‌ ಕಳೆದ ಸೋಮವಾರ ಅತ್ಯಾಚಾರ ಪ್ರಕರಣದಲ್ಲಿ ಪಂಚಕುಲ ಸಿಬಿಐ ವಿಶೇಷ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಹಾಗೂ 30 ಲಕ್ಷ ರುಪಾಯಿ ದಂಡ ವಿಧಿಸಿದೆ.
ಇನ್ನು ಶಿಕ್ಷೆ ಪ್ರಕಟವಾಗುವ ಮುನ್ನ ರಾಮ್ ರಹೀಂ ಸಿಂಗ್ ಸಿಬಿಐ ನ್ಯಾಯಧೀಶರ ಮುಂದೆ ನಾನು ಶಕ್ತಿಹೀನ, ನಪುಂಸಕ ನನಗೆ ಅತ್ಯಾಚಾರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ, ಇದಕ್ಕೆ ಕೂಡಲೆ ನ್ಯಾಯಾಧೀಶರು ನಿಮ್ಮ ಹೆಣ್ಣು ಮಕ್ಕಳು ಹೇಗೆ ಜನಿಸಿದರು ಎಂದು ಪ್ರಶ್ನಿಸಿದ್ದಾರೆ.
ರಾಮ್ ರಹೀಂ ನ್ಯಾಯಾಲಯಕ್ಕೆ ಹಲವು  ತಪ್ಪು ಮಾಹಿತಿಗಳನ್ನು ನೀಡಿರುವುದು ಕೋರ್ಟ್ ಗಮನಕ್ಕೆ ಬಂದಿದ್ದು, ಆತನ ಎಲ್ಲಾ ವಾದಗಳನ್ನು ತಳ್ಳಿ ಹಾಕಿದ ನ್ಯಾಯಾಲಯ ಆಗಸ್ಟ್ 25 ರಂದು ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ವಿಧಿಸಿದೆ.
1990 ರಿಂದ ನಾನು ನಪುಂಸಕನಾಗಿದ್ದು, ಯಾವುದೇ ರೀತಿಯ ದೈಹಿಕ ಸಂಪರ್ಕ ಹೊಂದಲು ಸಾಧ್ಯವಿಲ್ಲ,  ನಾನು ಶಕ್ತಿ ಹೀನ, ಹೀಗಿರುವಾಗ ನಾನು ಅತ್ಯಾಚಾರ ನಡೆಸುವ ಮಾತೇ ಇಲ್ಲ ಎಂದು ಹೇಳಿದ್ದಾನೆ.
ಜೊತೆಗೆ ತಾನು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಹೇಳಿದ್ದ, ಆತ ತನ್ನ ವಿರುದ್ಧದ ಎಲ್ಲಾ ಆರೋಪಗಳನ್ನು ಕೈ ಬಿಡುವಂತೆ ಮನವಿ ಮಾಡಿದ್ದ.
ರಾಮ್ ರಹೀಂ ಸಿಂಗ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ತಾನು ಶಕ್ತಿಹೀನ ಎಂದು ಹೇಳಿ ಕೊಳ್ಳುತ್ತಿದ್ದಾನೆ, ಆದರೆ ಅತ ಶಕ್ತಿಹೀನ ಅಲ್ಲ ಎಂಬುದಕ್ಕೆ ಆತನಿಗಿರುವ ಇಬ್ಬರು ಹೆಣ್ಣು ಮಕ್ಕಳೇ ಸಾಕ್ಷಿ ಎಂದು ಎಂದು ನ್ಯಾಯಾಲಯ ತಿಳಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com