ಲಕ್ನೋ: ಪೊಲೀಸ್ ಕಸ್ಟಡಿಯಿಂದ ತಿಂಗಳ ಹಿಂದೆ ಪರಾರಿಯಾಗಿದ್ದ ಶಾರ್ಪ್ ಶೂಟರ್ ಸುನೀಲ್ ಶರ್ಮಾ ಇಂದು ಬೆಳಗ್ಗೆ ಪೊಲೀಸರ ಎನ್ ಕೌಂಟರ್ ಗೆ ಬಲಿಯಾಗಿದ್ದಾನೆ.
ಕಳೆದ ಆಗಸ್ಟ್ 8 ರಂದು ಪೊಲೀಸ್ ಕಸ್ಟಡಿಯಿಂದ ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆದೊಯ್ಯುತ್ತಿದ್ದ ವೇಳೆ ತಪ್ಪಿಸಿಕೊಂಡು ಪರಾರಿಯಾಗಿದ್ದ.
ಲಕ್ನೋ ಪೊಲೀಸರು ಇಂದು ಬೆಳಗ್ಗೆ ಗೋಮ್ತಿ ನಗರದಲ್ಲಿ ಎನ್ ಕೌಂಟರ್ ನಡೆಸಿದ್ದಾರೆ, ಮೊದಲಿಗೆ ಗಾಯಗೊಂಡಿದ್ದ ಆತನನ್ನು ಪೊಲೀಸರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಆತ ಸಾವನ್ನಪ್ಪಿದ್ದಾನೆ.
ಸಲೀಂ ಸೋಹ್ರಾಬ್ ಗ್ಯಾಂಗ್ ಶಾರ್ಪ್ ಶೂಟರ್ ಆಗಿದ್ದ ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು.