ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಬಗ್ಗೆ ಪ್ರಧಾನಿ ಮೋದಿ ಅಪಹಾಸ್ಯ

ಮುಂಬರುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಬಗ್ಗೆ ಅಪಹಾಸ್ಯ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಆ ಪಕ್ಷಕ್ಕೆ ರಿಗ್ಗಿಂಗ್....
ನರೇಂದ್ರ ಮೋದಿ
ನರೇಂದ್ರ ಮೋದಿ
ಸುರೇಂದ್ರನಗರ: ಮುಂಬರುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಬಗ್ಗೆ ಅಪಹಾಸ್ಯ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಆ ಪಕ್ಷಕ್ಕೆ ರಿಗ್ಗಿಂಗ್ ಇತಿಹಾಸವೇ ಇದೆ ಎಂದು ಭಾನುವಾರ ಆರೋಪಿಸಿದ್ದಾರೆ.
ಇಂದು ಗುಜರಾತ್ ಸುರೇಂದ್ರನಗರದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಸಾಂಸ್ಥಿಕ ಚುನಾವಣೆಯಲ್ಲಿ ಕಾಂಗ್ರೆಸ್ ರಿಗ್ಗಿಂಗ್ ಇತಿಹಾಸವೇ ಇದೆ. ಕಾಂಗ್ರೆಸ್ ಪಕ್ಷದ ಉನ್ನತ ಹುದ್ದೆಗೆ ನಡೆಯುವ ಚುನಾವಣೆಯ ಫಲಿತಾಂಶ ಮೊದಲೆ ತೀರ್ಮಾನವಾಗಿರುತ್ತೆ ಎಂದು ವ್ಯಂಗ್ಯವಾಡಿದ್ದಾರೆ.
'ನಿಮ್ಮ ಮನೆ(ಪಕ್ಷ)ಯಲ್ಲಿ ನೀವು ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿಲ್ಲ ಎಂದರೆ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವ್ಯಸ್ಥೆಯನ್ನು ಹೇಗೆ ಜಾರಿಗೆ ತರುತ್ತೀರಾ?' ಎಂದು ಪ್ರಧಾನಿ ಕಾಂಗ್ರೆಸ್ ಅನ್ನು ಪ್ರಶ್ನಿಸಿದ್ದಾರೆ. 
ಕಾಂಗ್ರೆಸ್ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಆದರೆ ಅದರ ಫಲಿತಾಂಶ ಈಗ ಎಲ್ಲರಿಗೂ ಗೊತ್ತು. ಇದು ಕಾಂಗ್ರೆಸ್ ನಲ್ಲಿರುವ ಪರಿಸ್ಥಿತಿ. ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸರ್ದಾರ್ ಪಟೇಲ್ ಅವರು ಜವಾಹರ್ ಲಾಲ್ ನೆಹರು ಅವರಿಗಿಂತ ಹೆಚ್ಚು ಮತ ಗಳಿಸಿದ್ದರು. ಆದರೆ ರಿಗ್ಗಿಂಗ್ ಮಾಡುವ ಮೂಲಕ ನೆಹರು ಗೆಲುವು ಸಾಧಿಸಿದ್ದರು. ಮುರಾರ್ಜಿ ದೇಸಾಯಿ ಅವರಿಗೂ ಹೀಗೆ ಆಗಿತ್ತು ಎಂದು ಮೋದಿ ಆರೋಪಿಸಿದ್ದಾರೆ.
ಇದೇ ವೇಳೆ ರಾಹುಲ್ ಗಾಂಧಿ ಆಯ್ಕೆಯನ್ನು ಪ್ರಶ್ನಿಸಿದ್ದ ಮಹಾರಾಷ್ಟ್ರ ಕಾಂಗ್ರೆಸ್ ಬಂಡಾಯ ನಾಯಕ ಶೆಹಜಾದ್ ಪೂನಾವಾಲ ಅವರ ಧೈರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದು, ಭಿನ್ನಮತೀಯ ನಾಯಕ ಶೆಹಜಾದ್ ರ ಧ್ವನಿ ಅಡಗಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. 
ಆಂತರಿಕವಾಗಿಯೇ ಪ್ರಜಾಪ್ರಭುತ್ವ ಇಲ್ಲದವರು ಜನರಿಗಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ನಾನು ಶೆಹಜಾದ್ ಗೆ ಹೇಳುವುದಕ್ಕೆ ಇಷ್ಟಪಡುವುದೇನೆಂದರೆ, ನೀವು ಧೈರ್ಯವಾದ ಕೆಲಸ ಮಾಡಿದ್ದೀರಿ. ಆದರೆ ಬೇಸರದ ಸಂಗತಿಯೆಂದರೆ, ಯಾವಾಗಲೂ ಇದು ಕಾಂಗ್ರೆಸ್ ನಲ್ಲಿ ಆಗುವಂಥದ್ದೇ ಎಂದು ಮೋದಿ ಹೇಳಿದ್ದಾರೆ.
ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ರಾಹುಲ್ ಗಾಂಧಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com