ತೆಹಸೀನ್ ಪೂನವಾಲಾ
ದೇಶ
ರಾಹುಲ್ ಕಾಂಗ್ರೆಸ್ ಅಧ್ಯಕ್ಷರಾಗಲಿ ಎಂದು ನನ್ನ ಕುಟುಂಬ ಬಯಸಿದೆ: ತೆಹಸೀನ್ ಪೂನವಾಲಾ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಬೆಂಬಲಕ್ಕೆ ನಿಂತಿರುವ ಮಹಾರಾಷ್ಟ್ರ ಕಾಂಗ್ರೆಸ್ ಕಾರ್ಯದರ್ಶಿ ಶೆಹಜದ್ ಪೂನವಾಲಾ....
ಮುಂಬೈ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಬೆಂಬಲಕ್ಕೆ ನಿಂತಿರುವ ಮಹಾರಾಷ್ಟ್ರ ಕಾಂಗ್ರೆಸ್ ಕಾರ್ಯದರ್ಶಿ ಶೆಹಜದ್ ಪೂನವಾಲಾ ಅವರ ಸಹೋದರ ತೆಹಸೀನ್ ಪೂನವಾಲಾ ಅವರು, ತಮ್ಮ ಇಡೀ ಕುಟುಂಬ ರಾಹುಲ್ ಪಕ್ಷದ ನೇತೃತ್ವ ವಹಿಸಿಕೊಳ್ಳಲಿ ಎಂದು ಬಯಸಿರುವುದಾಗಿ ಹೇಳಿದ್ದಾರೆ.
ಎಎನ್ಐ ಜೊತೆ ಮಾತನಾಡಿದ ತೆಹಸೀನ್, ನನ್ನ ಇಡೀ ಕುಟುಂಬ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದೊಂದಿಗೆ ಇದೆ ಎಂಬುದನ್ನು ನಾನು ಮೊದಲು ಸ್ಪಷ್ಟಪಡಿಸುತ್ತಿದ್ದೇನೆ. ರಾಹುಲ್ ಗಾಂಧಿ ಅವರು ಪಕ್ಷವನ್ನು ಮುನ್ನಡೆಸಲಿ ಎಂದು ನಾವು ಬಯಸಿದ್ದೇವೆ ಎಂದಿದ್ದಾರೆ.
ರಾಹುಲ್ ಗಾಂಧಿ ಆಯ್ಕೆಯನ್ನು ಪ್ರಶ್ನಿಸಿದ್ದ ಶೆಹಜದ್ ಜೊತೆ ಪೂನವಾಲಾ ಕುಟುಂಬ ಸಂಬಂಧ ಕಡಿದುಕೊಂಡಿದೆ. ಶೆಹಜದ್ ಅವರಿಗೆ ಏನೇ ಸಮಸ್ಯೆ ಇದ್ದರು ಅದನ್ನು ಪಕ್ಷದ ವೇದಿಕೆಯಲ್ಲಿ ಹೇಳಿಕೊಳ್ಳಬೇಕಿತ್ತು. ಆದರೆ ಈ ರೀತಿ ಮಾಧ್ಯಮಕ್ಕೆ ಹೋಗಬಾರದಿತ್ತು ಎಂದು ತೆಹಸೀನ್ ಅವರು ಹೇಳಿದ್ದಾರೆ.
ಈ ಮಧ್ಯೆ, ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗಾಗಿ ನಡೆಯುತ್ತಿರುವುದು ಚುನಾವಣೆಯಲ್ಲ. ಇದು ಪಟ್ಟಾಭಿಷೇಕ ಎನ್ನುತ್ತಾರೆ. ಇದಕ್ಕೆ ನನ್ನ ವಿರೋಧ ಇದೆ ಎಂದು ಶೆಹಜದ್ ಪೂನವಾಲಾ ಅವರು ಹೇಳಿದ್ದಾರೆ.


