ಅಯೋಧ್ಯೆ-ರಾಮಜನ್ಮ ಭೂಮಿ ವಿವಾದ: ಇಂದಿನಿಂದ ಅಂತಿಮ ಹಂತದ ವಿಚಾರಣೆ

ದೀರ್ಘಾವಧಿಯಿಂದ ನಡೆದುಕೊಂಡು ಬಂದಿರುವ ರಾಮ ಜನ್ಮಭೂಮಿ ಬಾಬ್ರಿ ಮಸೀದಿ ವಿವಾದದ ಅಂತಿಮ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಆರಂಭಿಸುವ ಸಾಧ್ಯತೆಯಿದೆ. ಬಾಬ್ರಿ ಮಸೀದಿ....
ಬಾಬ್ರಿ ಮಸೀದಿಯನ್ನು ಕೆಡವಿದ ಹಿಂದೂ ಕಾರ್ಯಕರ್ತರ ಹರ್ಷೋದ್ಘಾರ
ಬಾಬ್ರಿ ಮಸೀದಿಯನ್ನು ಕೆಡವಿದ ಹಿಂದೂ ಕಾರ್ಯಕರ್ತರ ಹರ್ಷೋದ್ಘಾರ
ನವದೆಹಲಿ: ದೀರ್ಘಾವಧಿಯಿಂದ ನಡೆದುಕೊಂಡು ಬಂದಿರುವ ರಾಮ ಜನ್ಮಭೂಮಿ ಬಾಬ್ರಿ ಮಸೀದಿ ವಿವಾದದ ಅಂತಿಮ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಆರಂಭಿಸುವ ಸಾಧ್ಯತೆಯಿದೆ. ಬಾಬ್ರಿ ಮಸೀದಿ ಧ್ವಂಸವಾಗಿ ನಾಳೆಗೆ 25 ವರ್ಷವಾಗುತ್ತಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಅಶೋಕ್ ಭೂಷಣ್ ಹಾಗೂ ಅಬ್ದುಲ್ ನಝೀರ್ ಅವರ ನೇತೃತ್ವದ ವಿಶೇಷ ತ್ರಿಸದಸ್ಯ ನ್ಯಾಯಪೀಠ, ಅಲಹಾಬಾದ್ ಹೈಕೋರ್ಟ್ 2010ರಲ್ಲಿ ನೀಡಿದ ತೀರ್ಪಿಗೆ ವಿರುದ್ಧವಾಗಿ ಸಲ್ಲಿಸಲಾಗಿದ್ದ 13 ಮೇಲ್ಮನವಿಗಳ ವಿಚಾರಣೆಯನ್ನು ಆರಂಭಿಸಲಿದೆ.
ಅಯೋಧ್ಯೆಯಲ್ಲಿ 2.77 ಎಕರೆ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೊಹಿ ಅಕರ ಮತ್ತು ರಾಮ್ ಲಲ್ಲಾ ನಡುವೆ ಭಾಗ ಮಾಡುವಂತೆ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ತೀರ್ಪು ನೀಡಿತ್ತು.
ಉತ್ತರ ಪ್ರದೇಶದ ಶಿಯಾ ಕೇಂದ್ರ ವಕ್ಫ್ ಮಂಡಳಿಯ ಅಡಿಯಲ್ಲಿ ಮುಸಲ್ಮಾನರ ಗುಂಪೊಂದು, ವಿವಾದಿತ ಅಯೋಧ್ಯೆಯ ಭೂಮಿಯಿಂದ ಸ್ವಲ್ಪ ದೂರದಲ್ಲಿ ಮುಸಲ್ಮಾನರು ಹೆಚ್ಚಾಗಿರುವ ಪ್ರದೇಶದಲ್ಲಿ ಮಸೀದಿ ನಿರ್ಮಿಸಲು ಅವಕಾಶ ನೀಡಬೇಕೆಂದು ಅಲಹಾಬಾದ್ ಕೋರ್ಟ್ ಮೊರೆ ಹೋಗಿತ್ತು.
ಆದರೆ ಇದರ ಮಧ್ಯಪ್ರವೇಶವನ್ನು  ಅಖಿಲ ಭಾರತ ಸುನ್ನಿ ವಕ್ಫ್ ಮಂಡಳಿ ವಿರೋಧಿಸಿತ್ತು. 1946ರಲ್ಲಿ ಶಿಯಾ ಮತ್ತು ಸುನ್ನಿಯ ಎರಡು ಗುಂಪುಗಳ ನಡುವೆ ನ್ಯಾಯಾಂಗ ತೀರ್ಮಾನವನ್ನು ಮಾಡಲಾಗಿದ್ದು ಅದರಂತೆ ಅದು ಮಸೀದಿ ನಿರ್ಮಾಣಕ್ಕೆ ಇರುವ ಜಾಗವೆಂದು ಹೇಳಲಾಯಿತು. ಸುನ್ನಿಗೆ ಸೇರಿದ ಸ್ಥಳದಲ್ಲಿದ್ದ ಮಸೀದಿಯನ್ನು 1992, ಡಿಸೆಂಬರ್ 6ರಂದು ಕೆಡವಿ ಹಾಕಲಾಯಿತು ಎಂದು ಸುನ್ನಿ ವಕ್ಫ್ ಮಂಡಳಿ ಹೇಳುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com