ವಿವಿಧ ಸೇವೆಗಳಿಗೆ ಆಧಾರ್ ಲಿಂಕ್: ಗ್ರಾಹಕರು ಗಮನದಲ್ಲಿಟ್ಟುಕೊಳ್ಳಬೇಕಾದ ಗಡುವು ದಿನಾಂಕಗಳು

ವಿವಿಧ ಸೇವೆಗಳಿಗೆ ಆಧಾರ್ ಕಾರ್ಡ್ ನ್ನು ಲಿಂಕ್ ಮಾಡಿಸಲು ವಿಧಿಸಲಾಗಿರುವ ಗಡುವು ಸಹ ಬೇರೆ ಬೇರೆ ಇದ್ದು, ಯಾವ ಸೇವೆಗಳಿಗೆ ಯಾವ ದಿನಾಂಕವನ್ನು ಗಡುವಾಗಿ ನೀಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.
ಆಧಾರ್
ಆಧಾರ್
ನವದೆಹಲಿ: ಬ್ಯಾಂಕಿಂಗ್, ಮೊಬೈಲ್ ಸಿಮ್, ಪ್ಯಾನ್ ಕಾರ್ಡ್, ಪಿಪಿಎಫ್ ಹೀಗೆ ಜನಸಾಮಾನ್ಯರು ವ್ಯಾಪಕವಾಗಿ ಬಳಕೆ ಮಾಡುವ ಬಹುತೇಕ ಸೇವೆಗಳಿಗೆ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸುತ್ತಿದೆ.  ವಿವಿಧ ಸೇವೆಗಳಿಗೆ ಆಧಾರ್ ಕಾರ್ಡ್ ನ್ನು ಲಿಂಕ್ ಮಾಡಿಸಲು ವಿಧಿಸಲಾಗಿರುವ ಗಡುವು ಸಹ ಬೇರೆ ಬೇರೆ ಇದ್ದು, ಯಾವ ಸೇವೆಗಳಿಗೆ ಯಾವ ದಿನಾಂಕವನ್ನು ಗಡುವಾಗಿ ನೀಡಲಾಗಿದೆ ಎಂಬ ಮಾಹಿತಿ ಇಲ್ಲಿದೆ. 
ಬ್ಯಾಂಕ್ ಖಾತೆ: 
ಈಗಿರುವ ಮಾಹಿತಿಯ ಪ್ರಕಾರ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ನ್ನು ಲಿಂಕ್ ಮಾಡುವುದಕ್ಕೆ ಡಿ.31 ವರೆಗೆ ಗಡುವು ನೀಡಲಾಗಿದೆ. ಗ್ರಾಹಕರಿಗೆ ಆಧಾರ್ ಕಾರ್ಡ್ ನ್ನು ಲಿಂಕ್ ಮಾಡುವುದಕ್ಕೆ ಸುಲಭವಾಗಲೆಂದು ಬ್ಯಾಂಕ್ ಗಳಲ್ಲಿ ಆಧಾರ್ ಕೇಂದ್ರಗಳನ್ನು ತೆರೆಯಲಾಗಿದೆ.  ಮೊಬೈಲ್ ಬ್ಯಾಂಕಿಂಗ್, ಇಂಟರ್ ನೆಟ್ ಮೂಲಕವೂ ಸಹ ಬ್ಯಾಂಕ್ ಖಾತೆಗೆ ಆಧಾರ್ ನ್ನು ಲಿಂಕ್ ಮಾಡಬಹುದಾಗಿದೆ. 
ಪ್ಯಾನ್ ಕಾರ್ಡ್ 
ನಕಲಿ ಪ್ಯಾನ್ ಕಾರ್ಡ್ ಗಳ ಮೂಲಕ ಅಕ್ರಮ ಹಣ ವಹಿವಾಟು ತಡೆಯುವ ಉದ್ದೇಶದಿಂದ ಪ್ಯಾನ್ ಕಾರ್ಡ್ ಗಳಿಗೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಲಾಗಿದ್ದು, ಡಿ.31 ರೊಳಗೆ ಜೋಡಣೆ ಮಾಡಬೇಕಿದೆ. 
ಪಿಪಿಎಫ್, ಎನ್ಎಸ್ ಸಿ, ಕೆವಿಪಿ, ಪೋಸ್ಟ್ ಆಫೀಸ್: 
ಪೋಸ್ಟ್ ಆಫೀಸ್ ಡೆಪಾಸಿಟ್ ಗಳು, ಪಿಪಿಎಫ್, ಎನ್ಎಸ್ ಸಿ, ಕೆವಿಪಿ ಗಳಿಗೆ ಕೇಂದ್ರ ಸರ್ಕಾರ ಆಧಾರ್ ನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದ್ದು, ಈಗಿರುವ ಗ್ರಾಹಕರಿಗೆ ಡಿ.31 ವರೆಗೆ ಕಾಲಾವಕಾಶ ಇದೆ. 
ಸಾಮಾಜಿಕ ಯೋಜನೆಗಳು 
ಮನ್ರೇಗಾ, ಪಡಿತರ, ಎಲ್ ಪಿಜಿ, ಸೇರಿದಂತೆ ಸುಮಾರು 135 ಸಾಮಾಜಿಕ ಯೋಜನೆಗಳಿದ್ದು ಇವುಗಳ ಫಲಾನುಭವಿಗಳು ಡಿ.31 ವರೆಗೆ ಆಢಾರ್ ಕಾರ್ಡ್ ನ್ನು ತಮಗೆ ಸಂಬಂಧಪಟ್ಟ ಯೋಜನೆಗಳಿಗೆ ಜೋಡಣೆ ಮಾಡಬೇಕಿದೆ. 
ಮೊಬೈಲ್ ಸಿಮ್ 
ಮೊಬೈಲ್ ನೊಂದಿಗೆ ಆಧಾರ್ ಕಾರ್ಡ್ ನ್ನು ಜೋಡಣೆ ಮಾಡಲು 2018 ರ ಫೆ.6 ವರೆಗೆ ಕಾಲಾವಕಾಶ ಇದೆ. 
ಮ್ಯುಚುಯಲ್ ಫಂಡ್ಸ್ 
ಮ್ಯುಚ್ಯುಯಲ್ ಫಂಡ್ಸ್ ಗಳಿಗೂ ಸಹ ಆಧಾರ್ ಕಾರ್ಡ್ ನ್ನು ಕಡ್ಡಾಯಗೊಳಿಸಲಾಗಿದ್ದು ಡಿ.31 ರೊಳಗೆ ಆಧಾರ್ ಕಾರ್ಡ್ ನ್ನು ಲಿಂಕ್ ಮಾಡಬೇಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com