ಅಯೋಧ್ಯೆ ವಿವಾದ: ಸಿಬಲ್ ಹೇಳಿಕೆಯನ್ನು ಖಂಡಿಸಿದ ಸುನ್ನಿ ವಕ್ಫ್ ಬೋರ್ಡ್ ನಡೆ ಅಭಿನಂದನಾರ್ಹ- ಮೋದಿ ಮೆಚ್ಚುಗೆ

2019 ರ ಚುನಾವಣೆಯ ವರೆಗೂ ಸುಪ್ರೀಂ ಕೋರ್ಟ್ ಅಯೋಧ್ಯೆ ವಿವಾದದ ತೀರ್ಪನ್ನು ಮುಂದೂಡಬೇಕೆಂಬ ಕಪಿಲ್ ಸಿಬಲ್ ಅವರ ಹೇಳಿಕೆಯನ್ನು ಖಂಡಿಸಿದ್ದ ಸುನ್ನಿ ವಕ್ಫ್ ಬೋರ್ಡ್ ನಡೆಗೆ ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ
ನರೇಂದ್ರ ಮೋದಿ
ಗುಜರಾತ್: 2019 ರ ಚುನಾವಣೆಯ ವರೆಗೂ ಸುಪ್ರೀಂ ಕೋರ್ಟ್ ಅಯೋಧ್ಯೆ ವಿವಾದದ ತೀರ್ಪನ್ನು ಮುಂದೂಡಬೇಕೆಂಬ ಕಪಿಲ್ ಸಿಬಲ್ ಅವರ ಹೇಳಿಕೆಯನ್ನು ಖಂಡಿಸಿದ್ದ ಸುನ್ನಿ ವಕ್ಫ್ ಬೋರ್ಡ್ ನಡೆಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
ಕಪಿಲ್ ಸಿಬಲ್ ನಿಲುವಿನಿಂದ ಅಂತರವನ್ನು ಕಾಯ್ದುಕೊಂಡ ಸುನ್ನಿ ವಕ್ಫ್ ಬೋರ್ಡ್ ನ ನಡೆ ಅಭಿನಂದನಾರ್ಹ ಎಂದು ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದಾಗ ಹೇಳಿದ್ದಾರೆ. ಹೌದು ಕಪಿಲ್ ಸಿಬಲ್ ನಮ್ಮನ್ನು ಪ್ರತಿನಿಧಿಸುವ ವಕೀಲರು ಆದರೆ ಅವರು ರಾಜಕೀಯ ಪಕ್ಷವನ್ನೂ ಪ್ರತಿನಿಧಿಸುತ್ತಾರೆ. ನೆನ್ನೆ ಅವರು ಸುಪ್ರೀಂ ಕೋರ್ಟ್ ಗೆ ನೀಡಿರುವ ಹೇಳಿಕೆ ತಪ್ಪು, ನಮಗೆ ಸಮಸ್ಯೆಗೆ ಶೀಘ್ರ ಪರಿಹಾರ ಬೇಕು ಎಂದು  ಸುನ್ನಿ ವಕ್ಫ್ ಬೋರ್ಟ್ ನ ಮುಖ್ಯಸ್ಥ ಹಾಜಿ ಮೆಹಬೂಬ್ ಹೇಳಿದ್ದರು. 
ಕಪಿಲ್ ಸಿಬಲ್ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿ ರಾಮ ಮಂದಿರದ ವಿಷಯವಾಗಿ ಕಾಂಗ್ರೆಸ್ ನ ದ್ವಿಮುಖ ನೀತಿಯನ್ನು ಪ್ರಶ್ನಿಸುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com