ಮಣಿಶಂಕರ್‌ 'ನೀಚ' ಹೇಳಿಕೆ ಮೊಘಲ್ ಸಂಸ್ಕೃತಿಯ ಪ್ರತಿಬಿಂಬ: ಪ್ರಧಾನಿ ಮೋದಿ

ತಮ್ಮನ್ನು 'ನೀಚ ಆದ್ಮಿ' ಎಂದ ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್‌ ಅಯ್ಯರ್‌ ಅವರ ಹೇಳಿಕೆ ಕಾಂಗ್ರೆಸ್ ಪಕ್ಷದ ಮೊಘಲ್ ಸಂಸ್ಕೃತಿಯ....
ನರೇಂದ್ರ ಮೋದಿ
ನರೇಂದ್ರ ಮೋದಿ
ಸೂರತ್: ತಮ್ಮನ್ನು 'ನೀಚ ಆದ್ಮಿ' ಎಂದ ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್‌ ಅಯ್ಯರ್‌ ಅವರ ಹೇಳಿಕೆ ಕಾಂಗ್ರೆಸ್ ಪಕ್ಷದ ಮೊಘಲ್ ಸಂಸ್ಕೃತಿಯ ಪ್ರತಿಬಿಂಬ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತಿರುಗೇಟು ನೀಡಿದ್ದಾರೆ. 
ಇಂದು ಸೂರತ್ ನಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕರು ಬಳಸು ಕೀಳುಮಟ್ಟದ ಭಾಷೆಯನ್ನು ಪ್ರಜಾಪ್ರಭುತ್ವದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ, ಅವರು ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಓದಿದ್ದಾರೆ. ರಾಯಭಾರಿಯಾಗಿ, ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದಾರೆ. ಅಂತಹ ವ್ಯಕ್ತಿ ನನ್ನನ್ನು ನೀಚ ಎಂದು ಕರೆದಿದ್ದಾರೆ. ಇಂಥ ನೀಚ ಕೆಲಸವನ್ನು ಅವರು ಮಾತ್ರ ಮಾಡಲು ಸಾಧ್ಯ. ಇದು ಮೊಘಲರ ಸಂಸ್ಕೃತಿಯಲ್ಲದೆ ಬೇರೇನು ಅಲ್ಲ ಎಂದು ಮಣಿಶಂಕರ್ ಅಯ್ಯರ್ ಅವರ ಹೆಸರು ಪ್ರಸ್ತಾಪಿಸಿದೆ ಕಾಂಗ್ರೆಸ್ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದರು. 
ಕಾಂಗ್ರೆಸ್ ನವರು ಈ ಹಿಂದೆಯೂ ಹಲವಾರು ನನ್ನನ್ನು ಅವಮಾನಿಸಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗಲೂ ನಿಂದಿಸಿದ್ದಾರೆ. 'ಸಾವಿನ ವ್ಯಾಪಾರಿ' ಎಂದು ಕರೆದಿದ್ದಾರೆ ಮತ್ತು ನನ್ನನ್ನು ಜೈಲಿಗೆ ಕಳುಹಿಸಲು ಬಯಸಿದ್ದರು. ಅಂಥವರಿಗೆ ನಾವು ಏನೂ ಹೇಳುವುದಿಲ್ಲ. ಅವರಿಗೆ ಗುಜರಾತ್‌ ಜನತೆ ತಕ್ಕ ಉತ್ತರವನ್ನು ನೀಡಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದೆ. ಪ್ರಧಾನಮಂತ್ರಿಯಾಗಿದ್ದೇನೆ. ಇದುವರೆಗೂ ಯಾವುದಾದರೂ ನೀಚ ಕೆಲಸ ಮಾಡಿದ್ದೇನೆಯೇ ಎಂದು ಮೋದಿ ಪ್ರಶ್ನಿಸಿದ್ದಾರೆ.
ಇದಕ್ಕು ಮುನ್ನ ಪ್ರಧಾನಿ ಮೋದಿ ಒಬ್ಬ ನೀಚ ಆದ್ಮಿ, ಅವರು ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಮಣಿಶಂಕರ್ ಅಯ್ಯರ್ ಅವರು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com