ಮೋದಿ 'ನೀಚ ಆದ್ಮಿ' ಹೇಳಿಕೆ: ರಾಹುಲ್ ಸೂಚನೆ ಮೇರೆಗೆ ಕ್ಷಮೆಯಾಚಿಸಿದ ಮಣಿಶಂಕರ್ ಅಯ್ಯರ್

ಪ್ರಧಾನಿ ನರೇಂದ್ರ ಮೋದಿ 'ನೀಚ ಆದ್ಮಿ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಅವರು...
ರಾಹುಲ್ ಗಾಂಧಿ, ಮಣಿ ಶಂಕರ್ ಅಯ್ಯರ್
ರಾಹುಲ್ ಗಾಂಧಿ, ಮಣಿ ಶಂಕರ್ ಅಯ್ಯರ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 'ನೀಚ ಆದ್ಮಿ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಅವರು ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಗುರುವಾರ ಟ್ವೀಟ್ ಮಾಡಿದ್ದಾರೆ.
ಮಣಿಶಂಕರ್ ಅಯ್ಯರ್ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ, ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರು ಪದೇ ಪದೇ ಕೀಳುಮಟ್ಟದ ಭಾಷೆ ಬಳಸಿ ಕಾಂಗ್ರೆಸ್‌ ಪಕ್ಷವನ್ನು ಟೀಕಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ವಿಭಿನ್ನ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದ್ದು, ಇಂಥ ಕೆಟ್ಟ ಸಂಪ್ರದಾಯಕ್ಕೆ ಸೊಪ್ಪು ಹಾಕುವುದಿಲ್ಲ. ಪ್ರಧಾನಿ ಮೋದಿ ವಿರುದ್ಧ ಮಣಿಶಂಕರ್ ಅಯ್ಯರ್ ಬಳಸಿದ ಭಾಷೆ ಸರಿಯಿಲ್ಲ. ಹೀಗಾಗಿ ಅವರು ಈ ಕೂಡಲೇ ಕ್ಷಮೆಯಾಚಿಸುತ್ತಾರೆ ಎಂದು ನಾನು ಮತ್ತು ಪಕ್ಷ ನಿರೀಕ್ಷಿಸುತ್ತದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಸೂಚನೆ ಮೇರಗೆ ಮಣಿಶಂಕರ್ ಅಯ್ಯರ್ ಅವರು ಪ್ರಧಾನಿ ಮೋದಿ ಅವರ ಕ್ಷಮೆಯಾಚಿಸಿದ್ದು, ನನಗೆ ಸರಿಯಾಗಿ ಹಿಂದಿ ಬರಲ್ಲ. ಹೀಗಾಗಿ ಈ ಅವಾಂತರ ನಡೆದಿದೆ ಎಂದು ಹೇಳಿದ್ದಾರೆ.
ನಾನು ನೀಚ ಜಾತಿಯಲ್ಲಿ ಹುಟ್ಟಿದ ಮನುಷ್ಯ ಎಂಬ ಅರ್ಥದಲ್ಲಿ ಹೇಳಿಲ್ಲ. ಕೆಟ್ಟ ವ್ಯಕ್ತಿ ಎಂಬ ಅರ್ಥದಲ್ಲಿ ಹೇಳಿದ್ದೇನೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.
ಈ ಹಿಂದೆ 2014ರ ಲೋಕಸಭೆ ಚುನಾವಣೆ ವೇಳೆ ನರೇಂದ್ರ ಮೋದಿ ಅವರನ್ನು ಚಾಯ್ ವಾಲಾ ಎಂದು ಹೀಯ್ಯಾಳಿಸಿದ್ದ ಮಣಿಶಂಕರ್‌ ಈಗ ಮೋದಿಯನ್ನು ಅತ್ಯಂತ ನೀಚ ಮನುಷ್ಯ ಎಂದು ಹೇಳುವ ಮೂಲಕ ಮತ್ತೆ ವಿವಾದ ಮೈಮೇಲೆ ಎಳೆದುಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com