ಜಾಹೀರಾತಿಗಾಗಿ ಮೋದಿ ಸರ್ಕಾರ ಮಾಡಿದ ವೆಚ್ಚ ರು.3,755 ಕೋಟಿ!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ತನ್ನ ಪ್ರಚಾರಕ್ಕಾಗಿ ಕಳೆದ ಮೂರುವರೆ ವರ್ಷಗಳಲ್ಲಿ ಬರೊಬ್ಬರಿ 3,755 ಕೋಟಿ...
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ತನ್ನ ಪ್ರಚಾರಕ್ಕಾಗಿ ಕಳೆದ ಮೂರುವರೆ ವರ್ಷಗಳಲ್ಲಿ ಬರೊಬ್ಬರಿ 3,755 ಕೋಟಿ ರುಪಾಯಿ ವೆಚ್ಚ ಮಾಡಿರುವುದು ಆರ್ ಟಿಐ ಮಾಹಿತಿಯಿಂದ ಬಹಿರಂಗವಾಗಿದೆಯ
ಏಪ್ರಿಲ್ 2014ರಿಂದ ಅಕ್ಟೋಬರ್ 2017ರ ವರೆಗೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಹಾಗೂ ಇತರೆ ಪ್ರಚಾರಕ್ಕಾಗಿ ಮೋದಿ ಸರ್ಕಾರ 37,54,06,23,616 ರುಪಾಯಿ ಖರ್ಚು ಮಾಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆರ್ ಟಿಐ ಅರ್ಜಿಗೆ ಉತ್ತರ ನೀಡಿದೆ.
ಕೇಂದ್ರ ಸರ್ಕಾರ ಜಾಹೀರಾತಿಗಾಗಿ ಮಾಡಿದ ವೆಚ್ಚದ ವಿವಿರ ಕೋರಿ ಗ್ರೇಟರ್ ನೊಯ್ಡಾ ಮೂಲದ ಸಾಮಾಜಿಕ ಕಾರ್ಯಕರ್ತ ರಾಮ್ ವೀರ್ ತನ್ವಾರ್ ಅವರು ಆರ್ ಟಿಐ ಅರ್ಜಿ ಸಲ್ಲಿಸಿದ್ದರು.
ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ, ಸಮುದಾಯ ರೇಡಿಯೋ, ಡಿಜಿಟ್ ಸಿನಿಮಾ, ದೂರದರ್ಶನ, ಇಂಟರ್ ನೆಟ್, ಎಸ್ ಎಂಎಸ್ ಮತ್ತು ಟಿವಿ ಸೇರಿದಂತೆ ವಿದ್ಯುನ್ಮಾನ ಮಾಧ್ಯಮಕ್ಕೆ 1,656 ಕೋಟಿ ರುಪಾಯಿ ಜಾಹೀರಾತು ನೀಡಲಾಗಿದೆ.
ಇನ್ನು ನಾಲ್ಕು ಮುದ್ರಣ ಮಾಧ್ಯಮಕ್ಕಾಗಿ ಕೇಂದ್ರ ಸರ್ಕಾರ 1,698 ಕೋಟಿ ರುಪಾಯಿ ಜಾಹೀರಾತು ನೀಡಿದ್ದು, ಹೊರಾಂಗಣ ಜಾಹೀರಾತುಗಾಗಿ 399 ಕೋಟಿ ರುಪಾಯಿ ವೆಚ್ಚ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com