ಗುಜರಾತ್ ಚುನಾವಣೆ: ಮೊದಲ ಹಂತದಲ್ಲಿ 5 ಗಂಟೆ ವರೆಗೆ ಶೇ.70 ರಷ್ಟು ಮತದಾನ

ಗುಜರಾತ್ ನ ವಿಧಾನಸಭೆಗೆ ಡಿ.09 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಸಂಜೆ 5 ಗಂಟೆ ವರೆಗೆ ಶೇ.70 ರಷ್ಟು ಮತದಾನ ನಡೆದಿದೆ.
ಗುಜರಾತ್ ಚುನಾವಣೆ
ಗುಜರಾತ್ ಚುನಾವಣೆ
ಗಾಂಧಿನಗರ: ಗುಜರಾತ್ ನ ವಿಧಾನಸಭೆಗೆ ಡಿ.09 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಸಂಜೆ 5 ಗಂಟೆ ವರೆಗೆ ಶೇ.70 ರಷ್ಟು ಮತದಾನ ನಡೆದಿದೆ. 
ಗುಜರಾತ್ ನ ಮುಖ್ಯ ಚುನಾವಣಾಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ್ದು, ಬಹುತೇಕ ಮತಗಟ್ಟೆಗಳಲ್ಲಿ ಜನರು ಇನ್ನೂ ಸಾಲುಗಟ್ಟಿ ನಿಂತಿದ್ದಾರೆ ಎಂದು ಹೇಳಿದ್ದಾರೆ. ಮತದಾನ ಪ್ರಕ್ರಿಯೆ ಹಿಂದೆಂದಿಗಿಂತಲೂ ಹೆಚ್ಚಾಗುವ ಸಾಧ್ಯತೆ ಇದ್ದು ಶೇ.90 ರಷ್ಟನ್ನು ದಾಟುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮಧ್ಯಾಹ್ನ 3 ಗಂಟೆ ವೇಳೆಗೆ ಶೇ.50 ರಷ್ಟು ಮತದಾನ ನಡೆದಿತ್ತು. 
ಇದೇ ವೇಳೆ ಗುಜರಾತ್ ನಲ್ಲಿ ಮತಯಂತ್ರಗಳನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪವನ್ನು ಚುನಾವಣಾ ಆಯೋಗ ನಿರಾಕರಿಸಿದ್ದು, ಪೋರ್ಬಂದರ್ ನ ಕೆಲವು ಮತಗಟ್ಟೆಗಳ ಮತಯಂತ್ರಗಳಲ್ಲಿ ಬ್ಲೂಟೂತ್ ಹಾಗೂ ವೈಫೈ ಲಿಂಕ್ ಆಗಿದೆ ಎಂಬ ಆರೋಪ ಕೇಳಿಬಂದಿತ್ತು, ತಕ್ಷಣವೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು ಆದರೆ ಮತಯಂತ್ರಗಳನ್ನು ದುರ್ಬಳಕೆಯಾಗಿಲ್ಲ ಎಂದು ಚುನಾವಣಾಧಿಕಾರಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com