ಜೆ.ಪಿ. ನಾಡ್ಡಾ
ದೇಶ
ಭಾರತವು ಟ್ರಕೋಮಾ ಸೋಂಕು ಮುಕ್ತ ರಾಷ್ಟ್ರ: ಕೇಂದ್ರ ಸಚಿವ ಜೆ.ಪಿ. ನಾಡ್ಡಾ ಘೊಷಣೆ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಾಡ್ಡಾ ಅವರು ಮಕ್ಕಳಲ್ಲಿ ಸಾಂಕ್ರಾಮಿಕ ಕುರುಡುತನಕ್ಕೆ ಪ್ರಮುಖ ಕಾರಣವಾಗುವ ಸೋಂಕು ಟ್ರಕೋಮಾ ದಿಂದ ಭಾರತ....
ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಾಡ್ಡಾ ಅವರು ಮಕ್ಕಳಲ್ಲಿ ಸಾಂಕ್ರಾಮಿಕ ಕುರುಡುತನಕ್ಕೆ ಪ್ರಮುಖ ಕಾರಣವಾಗುವ ಸೋಂಕು ಟ್ರಕೋಮಾ ದಿಂದ ಭಾರತ ಮುಕ್ತವಾಗಿದೆ ಎಂದು ಘೋಷಿಸಿದ್ದಾರೆ. ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಐಎಂಎಸ್) ನ ನೇತ್ರವಿಜ್ಞಾನ ವಿಭಾಗದಲ್ಲಿ ನೆರೆದಿದ್ದ ಹಿರಿಯ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ಸಚಿವರು ಈ ಘೋಷಣೆ ಮಾಡಿದ್ದಾರೆ.
"ಸಮೀಕ್ಷೆ ನಡೆಸಿದ್ದ ಎಲ್ಲಾ ಜಿಲ್ಲೆಗಳಲ್ಲಿ ಒತ್ಟಾರೆ ಕೇವಲ ಶೇ. 0.7ರಷ್ಟು ಮಕ್ಕಳಲ್ಲಿ ಮಾತ್ರವೇ ಈ ಟ್ರಕೋಮಾ ಸೋಂಕು ಕಂಡು ಬಂದಿದೆ. ಇದು ಡಬ್ಲ್ಯೂಎಚ್ ಓ ನಿಂದ ವ್ಯಾಖ್ಯಾನಿಸಲ್ಪಟ್ಟಿರುವ ಟ್ರಾಕೊಮಾದ ಸೋಂಕಿನ ಮಾನದಂಡಕ್ಕಿಂತ ಕಡಿಮೆಯಾಗಿದೆ. ಸಮೀಕ್ಷೆಯ ಪ್ರಕಾರ, ಮಕ್ಕಳಲ್ಲಿ ಸಕ್ರಿಯ ಟ್ರಾಕೊಮಾ ಸೋಂಕು ಕಾಣಿಸಿಕೊಂಡಿಲ್ಲ." ಎಂದು ಸಚಿವ ನಾಡ್ಡಾ ಹೇಳಿದ್ದಾರೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸಕ್ರಿಯ ಸೋಂಕಿನ ಪ್ರಮಾಣವು ಶೇಕಡಾ 5 ಕ್ಕಿಂತ ಕಡಿಮೆಯಿದ್ದರೆ ಅಂತಹಾ ದೇಶವನ್ನು ಟ್ರಕೋಮಾ ಸೋಂಕು ಮುಕ್ತ ಪ್ರದೇಶವೆಂದು ಘೊಷಿಸಲಾಗುತ್ತದೆ
ವೈದ್ಯಕೀಯ ವಿಜ್ಞಾನಗಳ ಪ್ರಕಾರ, ಟ್ರಕೋಮಾ ಕಣ್ಣಿನ ದೀರ್ಘಕಾಲದ ಸೋಂಕಿನ ಕಾಯಿಲೆಯಾಗಿದ್ದು, ಮಕ್ಕಳಲ್ಲಿ ಕುರುಡುತನ ಕಾಣಿಸಿಕೊಳ್ಳುವ ಪ್ರಮುಖ ಕಾರಣವಾಗಿದೆ. ಕಲುಷಿತ ಪರಿಸರ ಮತ್ತು ನೈರ್ಮಲ್ಯ ಕೊರತೆ ಯಿಂದಾಗಿ ಈ ಸೋಂಕು ಕಾಣಿಸಿಕೊಳ್ಳುತ್ತದೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ