ವಂದೇ ಮಾತರಂ ಹಾಡುವುದಕ್ಕೇನು ಸಮಸ್ಯೆ ಎಂಬುದು ಅರ್ಥವಾಗುತ್ತಿಲ್ಲ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ವಂದೇ ಮಾತರಂ ಹಾಡುವುದಕ್ಕೆ ಇರುವ ಸಮಸ್ಯೆಗಳೇನು ಎಂಬುದು ಅರ್ಥವಾಗುತ್ತಿಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು
ಚೆನ್ನೈ: ವಂದೇ ಮಾತರಂ ಹಾಡುವುದಕ್ಕೆ ಇರುವ ಸಮಸ್ಯೆಗಳೇನು ಎಂಬುದು ಅರ್ಥವಾಗುತ್ತಿಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. 
ವಂದೇ ಮಾತರಂ ಎಂದರೆ ತಾಯಿಗೆ ನಮಸ್ಕರಿಸುವುದು ಸ್ವಾತಂತ್ರ್ಯ ಹೋರಾಟದಲ್ಲಿ ಅದರಿಂದ ಲಕ್ಷಾಂತರ ಜನರು ಪ್ರೇರಣೆ ಪಡೆದಿದ್ದರು. ಸ್ವಾಮಿ ವಿವೇಕಾನಂದರ ಶಿಷ್ಯರಾಗಿದ್ದ ಸೋದರಿ ನಿವೇದಿತಾ ಅವರು ವಂದೇ ಮಾತರಂ ನ ಶಾಲೆಗಳಲ್ಲಿ ಹಾಡಿಸುತ್ತಿದ್ದರು. ಆದರೆ ಈಗಿನ ಕೆಲವರಿಗೆ ವಂದೇ ಮಾತರಂ ಹಾಡುವುದಕ್ಕೆ ಸಮಸ್ಯೆ ಇದೆ ಎಂದು ವೆಂಕಯ್ಯ ನಾಯ್ಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ರಾಷ್ಟ್ರೀಯ ಕವಿ ಸುಬ್ರಹ್ಮಣ್ಯ ಭಾರತಿ ಅವರ 96 ನೇ ಜನ್ಮದಿನದ ಪ್ರಯುಕ್ತ ಮಾತನಾಡುತ್ತಿದ್ದ ವೆಂಕಯ್ಯ ನಾಯ್ಡು, ಎಷ್ಟೋ ವರ್ಷಗಳ ನಂತರ ನಾವು ವಂದೇ ಮಾತರಂ ಒಳ್ಳೆಯದೋ ಕೆಟ್ಟದ್ದೋ ಎಂಬ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ರಾಷ್ಟ್ರೀಯತೆ ಒಳ್ಳೆಯದೋ ಕೆಟ್ಟದ್ದೋ ಎಂಬ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಈ ಬಗ್ಗೆ ನಮಗೆ ನಾಚಿಕೆಯಾಗಬೇಕು ಎಂದು ನಾಯ್ಡು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com