’ಪಾಕಿಸ್ತಾನ ಹೈ ಕಮಿಷನರ್ ನ್ನು ಮಣಿಶಂಕರ್ ಅಯ್ಯರ್ ಭೇಟಿ ಆದದ್ದೇಕೆ?’ ಮೋದಿ ಪ್ರಶ್ನೆ

"ನನಗೂ, ಗುಜರಾತಿನ ಜನತೆಗೂ ಅಪಮಾನ ಮಾಡಿದ್ದ ಮಣಿಶಂಕರ್ ಅಯ್ಯರ್ ಪಾಕಿಸ್ತಾನದ ಹೈ ಕಮಿಷನರ್ ಅವರನ್ನು ಭೇಟಿಯಾಗಿದ್ದಾರೆ........
’ಪಾಕಿಸ್ತಾನ ಹೈ ಕಮಿಷನರ್ ನ್ನು ಮಣಿಶಂಕರ್ ಅಯ್ಯರ್ ಭೇಟಿ ಆದದ್ದೇಕೆ?’ ಮೋದಿ ಪ್ರಶ್ನೆ
’ಪಾಕಿಸ್ತಾನ ಹೈ ಕಮಿಷನರ್ ನ್ನು ಮಣಿಶಂಕರ್ ಅಯ್ಯರ್ ಭೇಟಿ ಆದದ್ದೇಕೆ?’ ಮೋದಿ ಪ್ರಶ್ನೆ
ಬನಸ್ಕಾಂತ(ಗುಜರಾತ್): "ನನಗೂ, ಗುಜರಾತಿನ ಜನತೆಗೂ ಅಪಮಾನ ಮಾಡಿದ್ದ ಮಣಿಶಂಕರ್ ಅಯ್ಯರ್ ಪಾಕಿಸ್ತಾನದ ಹೈ ಕಮಿಷನರ್ ಅವರನ್ನು ಭೇಟಿಯಾಗಿದ್ದಾರೆ ಎನ್ನುವ ವರದಿ ಬಂದಿದೆ.ಇದರ ಉದ್ದೇಶವೇನು?" ಮೋದಿ ಗುಜರಾತಿನಲ್ಲಿ ಪ್ರಶ್ನೆ ಮಾಡುವ ಮೂಲಕ ಮಣಿಶಂಕರ್ ಅಯ್ಯರ್ ನ್ನು ಬಹಿರಂಗವಾಗಿ ಟಿಕಿಸಿದರು..
ಗುಜರಾತಿನ  ಬನಸ್ಕಾಂತ ಜಿಲ್ಲೆಯ  ಪಲನ್ಪುರ್ ನಲ್ಲಿ ಬಹಿರಂಗ ಸಮಾವೇಶವನ್ನುದ್ದೇಶಿಸಿ ಮಾತನಾಡಿದ  ಮೋದಿ "ಪಾಕಿಸ್ತಾನದ ಸೇನೆಯ ಉನ್ನತಾಧಿಕಾರಿಗಳು ಕಾಂಗ್ರೆಸ್ ನ ಅಹಮದ್ ಪಟೇಲ್ ರನ್ನು ಗುಜರಾತಿನ ಮುಖ್ಯಮಂತ್ರಿಯಾಗಿಸುತ್ತೇನೆ ಎಂದು ಪತ್ರ ಬರೆದಿದ್ದಾರೆ! ಇದೇಕೆ ಪಾಕಿಸ್ತಾನ ಕಾಂಗ್ರೆಸ್ ಪಕ್ಷಕ್ಕೆ ಸಹಾಯ ಮಾಡುತ್ತಿದೆ?" ಎಂದು ಪ್ರಶ್ನಿಸಿದ್ದಾರೆ.
ಆಲೂಗಡ್ಡೆ  ಬೆಳೆಯುವಲ್ಲಿ ಈ ಜಿಲ್ಲೆಯ ರೈತರ ಯಶೋಗಾಥೆ ಇಡೀ ದೇಶಕ್ಕೆ ಮಾದರಿಯಾಗಿದೆ. ಎಂದ ಪ್ರಧಾನಿ ರೈತರ ಸಾಹಸ, ಶ್ರಮವನ್ನು ಕೊಂಡಾಡಿದ್ದಾರೆ.
ಗುಜರಾತಿನಲ್ಲಿ ಡಿ.14ರಂದು ಎರಡನೇ ಹಂತದ ಮತದಾನ ನಡೆಯಲಿದ್ದು ಡಿ.18ಕ್ಕೆ ಫಲಿತಾಂಶ ಹೊರಹೊಮ್ಮಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com