ಪ್ರತ್ಯೇಕತಾವಾದಿ ಯಾಸೀನ್ ಮಲ್ಲೀಕ್ ಬಂಧನ

ಜಮ್ಮು-ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆಕೆಎಲ್ಎಫ್) ನ ಅಧ್ಯಕ್ಷ ಮೊಹಮ್ಮದ್ ಯಾಸೀನ್ ಮಲ್ಲೀಕ್ ನ್ನು ಡಿ.10 ರಂದು ಬಂಧಿಸಲಾಗಿದೆ.
ಯಾಸೀನ್ ಮಲ್ಲೀಕ್
ಯಾಸೀನ್ ಮಲ್ಲೀಕ್
ಶ್ರೀನಗರ: ಜಮ್ಮು-ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆಕೆಎಲ್ಎಫ್) ನ ಅಧ್ಯಕ್ಷ ಮೊಹಮ್ಮದ್ ಯಾಸೀನ್ ಮಲ್ಲೀಕ್ ನ್ನು ಡಿ.10 ರಂದು ಬಂಧಿಸಲಾಗಿದೆ. 
ಪ್ರತಿಭಟನಾ ಮೆರವಣಿಗೆ ನೇತೃತ್ವ ವಹಿಸಿದ್ದ ಯಾಸೀನ್ ಮಲ್ಲೀಕ್, ಇದಕ್ಕೂ ಮುನ್ನ ಎರಡು ದಿನಗಳ ಕಾಲ ಭೂಗತನಾಗಿದ್ದ. ಡಿ.10 ರಂದು ಭಾರತ-ಪಾಕಿಸ್ತಾನದ ನಡುವೆ ಒರುವ ಯುನ್ ನ ವೀಕ್ಷಕರ ತಂಡ (ಯುಎನ್ ಐಎಂಒಜಿಐಪಿ) ಯತ್ತ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿದ್ದ ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದು, ಕೋಟಿಭಾಗ್ ನ ಪೊಲೀಸ್ ಠಾಣೆ ಬಳಿ ಬಂಧಿಸಿದ್ದಾರೆ. 
ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ ಗಮನ ಸೆಳೆಯುವುದಕ್ಕಾಗಿ ಶ್ರೀನಗರದಲ್ಲಿರುವ ಯುಎನ್ ಐಎಂಒಜಿಐಪಿ ಪ್ರಧಾನ ಕಚೇರಿ ಬಳಿ ಪ್ರತಿಭಟನೆ ನಡೆಸುವುದು ಪ್ರತ್ಯೇಕತಾವಾದಿಗಳ ಉದ್ದೇಶವಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಪ್ರತ್ಯೇಕತಾವಾದಿಗಳಾದ ಮಿರ್ವಾಜಾ ಉಮರ್ ಫಾರೂಕ್ ಹಾಗೂ ಸಯೀದ್ ಅಲಿ ಗಿಲಾನಿ, ಇನ್ನಿಬ್ಬರು ಹಿರಿಯ ಪ್ರತ್ಯೇಕತಾವಾದಿಗಳನ್ನು ಬಂಧಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com