ಅಮರನಾಥ ದೇವಾಲಯದಲ್ಲಿ ಮಂತ್ರ ಹೇಳುವಂತಿಲ್ಲ, ಘಂಟಾನಾದ ಮಾಡುವಂತಿಲ್ಲ, ಹಸಿರು ಪೀಠ ಆದೇಶ

ಅಮರನಾಥ ಗುಹೆಯಲ್ಲಿ ಮಂತ್ರಗಳ ಪಠಣಕ್ಕೆ ರಾಷ್ಟ್ರೀಯ ಹಸಿಉರು ಪೀಠವು ನಿಷೇಧ ಹೇರಿದೆ.
ಅಮರನಾಥ ದೇವಾಲಯದಲ್ಲಿ ಮಂತ್ರ ಹೇಳುವಂತಿಲ್ಲ, ಘಂಟಾನಾದ ಮಾಡುವಂತಿಲ್ಲ, ಹಸಿರು ಪೀಠ ಆದೇಶ
ಅಮರನಾಥ ದೇವಾಲಯದಲ್ಲಿ ಮಂತ್ರ ಹೇಳುವಂತಿಲ್ಲ, ಘಂಟಾನಾದ ಮಾಡುವಂತಿಲ್ಲ, ಹಸಿರು ಪೀಠ ಆದೇಶ
Updated on
ನವದೆಹಲಿ: ಅಮರನಾಥ ಗುಹೆಯಲ್ಲಿ ಮಂತ್ರಗಳ ಪಠಣಕ್ಕೆ ರಾಷ್ಟ್ರೀಯ ಹಸಿಉರು ಪೀಠವು ನಿಷೇಧ ಹೇರಿದೆ. ಅಮರನಾಥ ಗುಹಾ ದೇವಾಲಯ ಆಡಳಿತ ಮಂಡಳಿಗೆ  ಈ ಕುರಿತಂತೆ ಪೀಠವು ಆದೇಶ ನೀಡಿದೆ ಎಂದು ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಯಾತ್ರಾರ್ಥಿಗಳಿಗೆ ಸಾಕಷ್ಟು ಮೂಲಭೂತ ಸೌಕರ್ಯ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಹಸಿರು ಪೀಠವು ಕಳೆದ ತಿಂಗಳು ಅಮರನಾಥ ದೇವಾಲಯ ಮಂಡಳಿಯಿಂದ ಆಡಳಿತವನ್ನು ತಾನು ವಹಿಸಿಕೊಂಡಿತ್ತು. ಹೀಗೆ ಆಡಳಿತ ತನ್ನ ವಶಕ್ಕೆ ಬಂದ ಬಳಿಕ ಪೀಠ ಈ ಆದೇಶ ಹೊರಡಿಸಿದೆ.
ಬುಧವಾರ, ಮುಖ್ಯ ನ್ಯಾಯಮೂರ್ತಿ ಸ್ವಾತಂತರ್ ಕುಮಾರ್ ನೇತೃತ್ವದ ಎನ್ ಜಿಟಿ ಪೀಠವು ಗುಹಾ ದೇವಾಲಯದಲ್ಲಿ ಘಂಟಾನಾದ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಸಮುದ್ರ ಮಟ್ಟದಿಂದ 3,888 ಮೀಟರುಗಳಷ್ಟು ಎತ್ತರದಲ್ಲಿರುವ ಈ ದೇವಾಲಯ ಪ್ರವೇಶಿಸಲು ಭಕ್ತರು ತಮ್ಮ  ಮೊಬೈಲ್ ಮತ್ತು ಇತರೆ ಲಗೇಜ್ ಗಳನ್ನು ಕೊನೆಯ ಚೆಕ್ ಪೋಸ್ಟ್ ನಲ್ಲಿ ಇರಿಸಬೇಕಾಗಿತ್ತು
ದೇವಾಲಯದ ಆವರಣದಲ್ಲಿ ಯಾವ ಮಂತ್ರೋದ್ಘಾರವಾಗಲಿ, ಜೈಕಾರಗಳಾಗಲೀ ಕೇಳಿ ಬರಬಾರದೆಂದು ಹಸಿರು ಪೀಠವು ಹೇಳಿದ್ದು ದೇವಾಲಯದ ಆಡಳಿತ ವಹಿಸಿಕೊಂಡವರು ಈ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದಿದೆ. ಅಲ್ಲದೆ ಕಡೆಯ ಚೆಕ್ ಪೋಸ್ಟ್ ನಿಂದ ನಂತರ ಜನರು ಒಂದೇ ಸಾಲಿನಲ್ಲಿ ಚಲಿಸಿ ದೇವಾಲಯವನ್ನು ಪ್ರವೇಶಿಸಬೇಕೆಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com