ರೆಸ್ಟೋರೆಂಟ್, ಹೋಟೆಲ್‍ನಲ್ಲಿ ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮಿನರಲ್ ವಾಟರ್ ಮಾರಬಹುದು: ಸುಪ್ರೀಂ

ಹೋಟೆಲ್, ರೆಸ್ಟೋರೆಂಟ್, ಮಲ್ಟಿಪ್ಲೆಕ್ಸ್ ಗಳಲ್ಲಿ ಮಿನರಲ್ ವಾಟರ್ ಅನ್ನು ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮಾರಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ...
ಮಿನರಲ್ ವಾಟರ್
ಮಿನರಲ್ ವಾಟರ್
ನವದೆಹಲಿ: ಹೋಟೆಲ್, ರೆಸ್ಟೋರೆಂಟ್, ಮಲ್ಟಿಪ್ಲೆಕ್ಸ್ ಗಳಲ್ಲಿ ಮಿನರಲ್ ವಾಟರ್ ಅನ್ನು ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮಾರಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. 
ಮುದ್ರಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರುವ ಹೋಟೆಲ್, ರೆಸ್ಟೋರೆಂಟ್ ಗಳ ವಿರುದ್ಧ ದಂಡ ಅಥವಾ ಯಾವುದೇ ತನಿಖೆಯನ್ನೂ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಆರ್ ಎಫ್ ನಾರಿಮನ್ ಹೇಳಿದ್ದಾರೆ. 
ಭಾರತೀಯ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘಗಳ ಒಕ್ಕೂಟ(ಎಫ್ಎಚ್ಆರ್ಎಐ) ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸುಪ್ರೀಂಕೋರ್ಟ್ ಮುಂದೆ ತನ್ನ ಅಹವಾಲು ಸಲ್ಲಿಸಿತ್ತು. ಅದರಲ್ಲಿ ನೀರಿನ ಬಾಟಲಿಗಳ ಮೇಲಿನ ಎಂಆರ್ಪಿ ದರಕ್ಕಿಂತ ಹೆಚ್ಚು ದರಗಳಲ್ಲಿ ಮಾರಿದರೆ ಅದೂ ಒಂದು ರೀತಿಯ ತೆರಿಗೆ ವಂಚನೆ. ಹಾಗಾಗಿ ಅದು ಶಿಕ್ಷಾರ್ಹ ಎಂದು ಹೇಳಿತ್ತು. 
ಕೇಂದ್ರ ಸರ್ಕಾರದ ವಾದವನ್ನು ತಳ್ಳಿಹಾಕಿದ ಸುಪ್ರೀಂಕೋರ್ಟ್ ಹೊಟೇಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಮಿನರಲ್ ನೀರು ಪಡೆಯುವ ಗ್ರಾಹಕರು ಅಲ್ಲಿನ ವಾತಾವರಣವನ್ನೂ ಅನುಭವಿಸುವುದರಿಂದ ನೀರನ್ನು ಮಾತ್ರ ಎಂಆರ್ಪಿ ಗಿಂತ ಹೆಚ್ಚಿನ ಬೆಲೆಗೆ ಮಾರಬಹುದು ಎಂದು ಆದೇಶಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com