ಚೆನ್ನೈ ಆರ್ ಕೆ ನಗರ ಉಪ ಚುನಾವಣೆ; ಮತದಾರರ ಉನ್ನತ ಆಯ್ಕೆ ದಿನಕರನ್: ಸಮೀಕ್ಷೆ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ನಿಧನದಿಂದ ತೆರವಾದ ಆರ್ ಕೆ ನಗರ ವಿಧಾನಸಭೆಗೆ ಬುಧವಾರ ಉಪ ಚುನಾವಣೆ....
ಟಿಟಿವಿ ದಿನಕರನ್
ಟಿಟಿವಿ ದಿನಕರನ್
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ನಿಧನದಿಂದ ತೆರವಾದ ಆರ್ ಕೆ ನಗರ ವಿಧಾನಸಭೆಗೆ ಬುಧವಾರ ಉಪ ಚುನಾವಣೆ ನಡೆದರೆ ಎಐಎಡಿಎಂಕೆ ಉಚ್ಚಾಟಿತ ನಾಯಕ ಟಿಟಿವಿ ದಿನಕರನ್ ಅವರು ಅತಿ ಹೆಚ್ಚು ಅಂದರೆ ಶೇ.35.5ರಷ್ಟು ಮತಗಳನ್ನು ಗಳಿಸಲಿದ್ದಾರೆ ಎಂದು ಬಹು ಶಿಸ್ತಿನ ಸಂಶೋಧನಾ ಸಂಸ್ಥೆ ಪೀಪಲ್ ಸ್ಟಡೀಸ್ ಸಮೀಕ್ಷೆ ಹೇಳಿದೆ.
ಇಂದು ಸಮೀಕ್ಷೆಯ ವರದಿಯನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೊ. ಎಸ್ ರಾಜನಾಯಕಮ್ ಹಾಗೂ ಅವರ ಸಹಾಯಕ, ದಿನಕರನ್ ಅವರ ಪ್ರೆಸ್ಸರ್ ಕುಕ್ಕರ್ ಇತರೆ ಚಿಹ್ನೆಗಳಾದ ಎರಡೇಲೆ ಹಾಗೂ ರೈಸಿಂಗ್ ಸನ್ ಗಿಂತಲೂ ಹೆಚ್ಚು ಜನಪ್ರಿಯವಾಗಿದ ಎಂದಿದ್ದಾರೆ.
ಶೇ.91.6ರಷ್ಟು ಮತದಾರರು ಪ್ರೆಸ್ಸರ್ ಕುಕ್ಕರ್ ದಿನಕರನ್ ಅವರ ಚಿಹ್ನೆ ಎಂದು ಸ್ಪಷ್ಟವಾಗಿ ಗುರುತಿಸಿದ್ದಾರೆ. ಎರಡೇಲೆ ಮತ್ತು ಇ ಮಧುಸೂದನನ್ ಅವರನ್ನು ಶೇ.81.1ರಷ್ಟು ಜನ ಹಾಗೂ ಡಿಎಂಕೆ ರೈಸಿಂಗ್ ಸನ್ ಚಿಹ್ನೆ ಮತ್ತು ಮರುತು ಗಣೇಶ್ ಅವರನ್ನು ಶೇ.77.8ರಷ್ಟು ಜನ ಗುರುತಿಸಿರುವುದಾಗಿ ಸಮೀಕ್ಷೆ ತಿಳಿಸಿದೆ.
ಒಟ್ಟು ಮತಗಳಿಕೆಯಲ್ಲಿ ಡಿಎಂಕೆಯ ಮರುತು ಗಣೇಶ್ ಅವರು ಎರಡನೇ ಸ್ಥಾನ ಪಡೆದಿದ್ದು, ಐಎಎಡಿಎಂಕೆಯ ಅಧಿಕೃತ ಅಭ್ಯರ್ಥಿ ಇ ಮಧುಸೂದನನ್ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಆರ್ ಕೆ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯು ಡಿಸೆಂಬರ್‌ 21ರಂದು ನಡೆಯಲಿದ್ದು, ಡಿ.24ರಂದು ಮತ ಎಣಿಕೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com