ಮೊದಲ ಸ್ವದೇಶಿ ನಿರ್ಮಿತ ಐಎನ್ಎಸ್ ಕಲ್ವರಿ ಬಗ್ಗೆ ತಿಳಿದುಕೊಳ್ಳಬೇಕಾದ ಮಾಹಿತಿ

ದೇಶದ ಮೊದಲ ಸ್ವದೇಶಿ ನಿರ್ಮಿತ ಸ್ಕಾರ್ಪಿನ್ ಶ್ರೇಣಿಯ ಜಲಾಂತರ್ಗಾಮಿ ನೌಕೆ ಐಎನ್ಎಸ್ ಕಲ್ವರಿ ....
ಐಎನ್ಎಸ್ ಕಲ್ವರಿ
ಐಎನ್ಎಸ್ ಕಲ್ವರಿ
ನವದೆಹಲಿ: ದೇಶದ ಮೊದಲ ಸ್ವದೇಶಿ ನಿರ್ಮಿತ ಸ್ಕಾರ್ಪಿನ್ ಶ್ರೇಣಿಯ ಜಲಾಂತರ್ಗಾಮಿ ನೌಕೆ ಐಎನ್ಎಸ್ ಕಲ್ವರಿ ಭಾರತೀಯ ನೌಕಾಪಡೆಗೆ ಇಂದು ಸೇರ್ಪಡೆಗೊಂಡಿದೆ. ಮೇಕ್ ಇನ್ ಇಂಡಿಯಾಗೆ ಇದೊಂದು ಉತ್ತಮ ಉದಾಹರಣೆ ಎಂದು ಮುಂಬೈಯಲ್ಲಿ ಇಂದು ಜಲಾಂತರ್ಗಾಮಿ ನೌಕೆ ಸೇರ್ಪಡೆ ನಂತರ ಪ್ರಧಾನಿ ಮೋದಿ ಹೇಳಿದರು. 
ಭಾರತೀಯ ನೌಕಾಪಡೆಯ ಪ್ರಾಜೆಕ್ಟ್-75ರ ಭಾಗವಾಗಿ ಮಝಗಾನ್ ಡಾಕ್ 6 ಜಲಾಂತರ್ಗಾಮಿ ಸ್ಕಾರ್ಪಿನ್ ನೌಕೆಯನ್ನು ನಿರ್ಮಿಸಿದೆ. ಉಳಿದ 5 ನೌಕೆಗಳು 2020ರ ವೇಳೆಗೆ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿದೆ. ಭಾರತದಲ್ಲಿ ಇಲ್ಲಿಯವರೆಗೆ 15 ಜಲಾಂತರ್ಗಾಮಿ ನೌಕೆಗಳಿವೆ. ಇವುಗಳು ರಷ್ಯಾ ಮೂಲದ ಕಿಲೊ ವರ್ಗದ ಪದಾರ್ಥಗಳು ಮತ್ತು ಜರ್ಮ ಜಲಾಂತರ್ಗಾಮಿ ಗಳ ಮಿಶ್ರಣವಾಗಿದೆ. 
1. 6 ಸ್ಕಾರ್ಪಿನ್ ಮಾದರಿಯ ಜಲಾಂತರ್ಗಾಮಿ ನೌಕೆಗಳನ್ನು 3 ಶತಕೋಟಿ ಡಾಲರ್ ವೆಚ್ಚದಲ್ಲಿ ನೌಕಾಪಡೆ ಸೇರ್ಪಡೆ ಮಾಡಿಕೊಳ್ಳಲಿದೆ. ಮೊದಲ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಯ ಕಲ್ವರಿಯಾಗಿದೆ.
2. ಕಲ್ವರಿ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆ ನೌಕಾಪಡೆಯಲ್ಲಿರುವ ಅತ್ಯಂತ ಆಧುನಿಕ ಪರಮಾಣುರಹಿತ ಜಲಾಂತರ್ಗಾಮಿ ನೌಕೆಯಾಗಿದ್ದು ಅದು ಡೀಸೆಲ್-ಎಲೆಕ್ಟ್ರಿಕ್ ಮೋಟಾರ್ ನಿಂದ ಚಾಲಿತವಾಗಲಿದೆ.
3. ಜಲಾಂತರ್ಗಾಮಿ, ಭಾರವಾದ ನೌಕಾಪಡೆಗಳನ್ನು ಮತ್ತು ಎಕ್ಸೋಸೆಟ್ ರಹಿತ ಹಡಗು ಕ್ಷಿಪಣಿಗಳನ್ನು ಹೊಂದಿದವುಗಳಾಗಿವೆ. 
4. ಕಲ್ವರಿ ಸ್ಕಾರ್ಪಿನೊ ಜಲಾಂತರ್ಗಾಮಿ ನೌಕೆಯ ಒಟ್ಟು ಉದ್ದ 67.5 ಮೀಟರ್ ಮತ್ತು ಎತ್ತರ 12.3 ಮೀಟರ್ ಗಳಾಗಿದೆ.
5. ಎರಡನೇ ಸ್ಕಾರ್ಪಿನ್ ಜಲಾಂತರ್ಗಾಮಿ ಐಎನ್ಎಸ್ ಖಂಡೇರಿ ಮೇಲೆ ಪ್ರಯೋಗಗಳು ನಡೆಯುತ್ತಿದ್ದು ಅದು ಸದ್ಯದಲ್ಲಿಯೇ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿದೆ.
6. ಕಲ್ವರಿ ಎಂದರೆ ಮಲಯಾಳಂ ಭಾಷೆಯಲ್ಲಿ ಟೈಗರ್ ಶಾರ್ಕ್ ಎಂದರ್ಥ. ಅದರ ಚುರುಕುತನ, ಶಕ್ತಿ ಮತ್ತು ಪರಾಕ್ರಮವನ್ನು ಕೂಡ ಕಲ್ವರಿ ಹೆಸರು ಪ್ರತಿನಿಧಿಸುತ್ತದೆ.ಹಿಂದೂ ಮಹಾಸಾಗರದ ಪ್ರಾಣಾಂತಿಕ ಆಳ ಸಮುದ್ರದ ಪರಭಕ್ಷಕ ಪ್ರಾಣಿ ಟೈಗರ್ ಶಾರ್ಕ್ ಆಗಿದೆ. 
7. ಕಲ್ವರಿ 19 ನೌಕಾಪಡೆಗಳನ್ನು ಒಂದು ಬಾರಿಗೆ ಸಾಗಿಸಲಿದ್ದು 1,020 ಕಿಲೋ ಮೀಟರ್ ವರೆಗೆ ನೀರಿನೊಳಗೆ ಸಾಗುತ್ತದೆ. ಇದು 300 ಮೀಟರ್ ಆಳಕ್ಕಿಳಿದು ಶತ್ರುಗಳನ್ನು ಪತ್ತೆಹಚ್ಚಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com