ಗುಜರಾತ್ 2ನೇ ಹಂತದ ಮತದಾನ: ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಮೋದಿ
ಡಿ.14 ರಂದು ಗುಜರಾತ್ ನ ವಿಧಾನಸಭಾ ಚುನಾವಣೆಗೆ 2 ನೇ ಹಂತದ ಮತದಾನ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್ ನ ರಾನಿಪ್ ನ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದ್ದಾರೆ.
ಅಹಮದಾಬಾದ್: ಡಿ.14 ರಂದು ಗುಜರಾತ್ ನ ವಿಧಾನಸಭಾ ಚುನಾವಣೆಗೆ 2 ನೇ ಹಂತದ ಮತದಾನ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್ ನ ರಾನಿಪ್ ನ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದ್ದಾರೆ.
ರಾನಿಪ್ ನಲ್ಲಿರುವ ನಿಶಾನ್ ಹೈಸ್ಕೂಲ್ ನ ಮತಗಟ್ಟೆ 115 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತದಾನ ಮಾಡಿದ್ದಾರೆ. ಪ್ರಧಾನಿ ಆಗಮಿಸುತ್ತಿದ್ದಂತೆಯೇ ನೆರೆದಿದ್ದ ಜನರು ಮೋದಿ... ಮೋದಿ ಘೋಷಣೆ ಕೂಗಲು ಪ್ರಾರಂಭಿಸಿದರು. ಮತಗಟ್ಟೆ ಇರುವ ಪ್ರದೇಶಕ್ಕೆ ಆಗಮಿಸುತ್ತಿದ್ದಂತೆಯೇ ಪ್ರಧಾನಿ ಜನತೆಯತ್ತ ಕೈ ಬೀಸಿ ಮತಗಟ್ಟೆಗೆ ತೆರಳಿ ಮತಚಲಾವಣೆ ಮಾಡಿದರು.
ಮತದಾನ ಮಾಡಿದ ಪ್ರಧಾನಿ ಮೋದಿ ಅವರ ತಾಯಿ
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ (95) ಸಹ ಗಾಂಧಿನಗರದಲ್ಲಿ ಮತದಾನ ಮಾಡಿದ್ದಾರೆ. ಎರಡನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ 93 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.