ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿ ಖುಲಾಸೆ ಪ್ರಶ್ನಿಸಿ ಹೇಮ್ ರಾಜ್ ಪತ್ನಿಯಿಂದ ಸುಪ್ರೀಂ ಗೆ ಮೇಲ್ಮನವಿ

ಆರುಷಿ-ಹೇಮ್ ರಾಜ್ ಜೋಡಿ ಕೊಲೆ ಪ್ರಕರಣದಲ್ಲಿ ಆರುಷಿ ಪೋಷಕಕರನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಹೇಮ್ ರಾಜ್ ಪತ್ನಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ತಲ್ವಾರ್ ದಂಪತಿ
ತಲ್ವಾರ್ ದಂಪತಿ
ಆರುಷಿ-ಹೇಮ್ ರಾಜ್ ಜೋಡಿ ಕೊಲೆ ಪ್ರಕರಣದಲ್ಲಿ ಆರುಷಿ ಪೋಷಕಕರನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಹೇಮ್ ರಾಜ್ ಪತ್ನಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ. 
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅಕ್ಟೊಬರ್ 12 ರಂದು ಅಲ್ಲಾಹಾಬಾದ್ ಹೈಕೋರ್ಟ್ ಆರುಷಿ-ಹೇಮ್ ರಾಜ್ ಅವರನ್ನು ನಿರ್ದೋಷಿ ಎಂದು ತೀರ್ಪು ನೀಡಿತ್ತು. ದಂತ ವೈದ್ಯ ದಂಪತಿಗಳ ಪುತ್ರಿ ಆರುಷಿ ಹಾಗೂ ಮನೆ ಕೆಲಸದ ವ್ಯಕ್ತಿಯಾಗಿದ್ದ ಹೇಮ್ ರಾಜ್ 2008 ರ ಮೇ 15 ರಂದು ಹತ್ಯೆಯಾಗಿದ್ದರು. ಮೇ.16 ರಂದು ಆರುಷಿ ಮೃತ ದೇಹ ಪತ್ತೆಯಾಗಿತ್ತು. ಪ್ರಮುಖ ಸಾಕ್ಷಿಯಾಗಿದ್ದ ಹೇಮ್ ರಾಜ್ ನಾಪತ್ತೆಯಾಗಿದ್ದ, ಆದರೆ ಮರು ದಿನ ಆತನ ಮೃತದೇಹವೂ ಪತ್ತೆಯಾಗಿತ್ತು. 
ಸಿಬಿಐ ಕೋರ್ಟ್ 2013 ರಲ್ಲಿ ತಲ್ವಾರ್ ದಂಪತಿಯನ್ನು ದೋಷಿಗಳೆಂದು ತೀರ್ಪು ಪ್ರಕಟಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು, ಸಿಬಿಐ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ತಲ್ವಾರ್ ದಂಪತಿಗಳು ಅಲ್ಲಹಾಬಾದ್ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com