ಪಂಜಾಬ್, ಹರಿಯಾಣ, ಚಂಡೀಗಢ ದಲ್ಲಿ ಪಟಾಕಿ ನಿಷೇಧ ತೆರವಿಗೆ ಸುಪ್ರೀಂ ನಕಾರ

ಪಂಜಾಬ್, ಹರಿಯಾಣ ಮತ್ತು ಚಂಡೀಗಢದಲ್ಲಿ ಪಟಾಕಿ ನಿಷೇಧವನ್ನು ತೆರವುಗೊಳಿಸಲು ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Updated on
ನವದೆಹಲಿ: ಪಂಜಾಬ್, ಹರಿಯಾಣ ಮತ್ತು ಚಂಡೀಗಢದಲ್ಲಿ ಪಟಾಕಿ  ನಿಷೇಧವನ್ನು ತೆರವುಗೊಳಿಸಲು ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. 
ನ್ಯಾಯಮೂರ್ತಿ ಎ. ಕೆ. ಸಿಕ್ರಿ ಮತ್ತು ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರನ್ನೊಳಗೊಂಡ ಪೀಠವು ಪಟಾಕಿ ನಿಷೇಧದ ವಿರುದ್ಧ  ಹೈಕೋರ್ಟ್ ಆದೇಶದ ವಿವರಣೆಯನ್ನು ಜನವರಿ 5 ರಂದು ಕೇಳುವುದಾಗಿ ತಿಳಿಸಿದೆ.
ಈ ತಿಂಗಳ ಪ್ರಾರಂಭದಲ್ಲಿ ದೇಶದಾದ್ಯಂತ ಪಟಾಕಿ  ಅಥವಾ ಸುಡುಮದ್ದು ಬಳಕೆ ಮತ್ತು ಉತ್ಪಾದನೆಯ ಮೇಲೆ ನಿಷೇಧವನ್ನು ಕೋರಿ ಸಲ್ಲಿಸಿದ್ದ ಮನವಿ ಆಲಿಸಲು ಸುಪ್ರೀಂ ಕೋರ್ಟ್ ತೀರ್ಮಾನಿಸಿತ್ತು.
ಆದರೆ ಇದೀಗ ಕೋರ್ಟ್ ನಾಲ್ಕು ವಾರಗಳಲ್ಲಿ ಈ ಸಂಬಂಧ ವಿವರವಾದ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com