ನವದೆಹಲಿ: "ನನ್ನ ಮಗಳ ಮೇಲೆ ಅತ್ಯಾಚಾರ ನಡೆದು ಹತ್ಯೆಯಾಗಿ ಐದು ವರ್ಷಗಳಾದರೂ ವರ್ಷವಾದರೂ ಅಪರಾಧಿಗಳು ಮಾತ್ರ ಇನ್ನೂ ಬದುಕಿದ್ದಾರೆ. ತಪ್ಪಿಗೆ ತಕ್ಕ ಶಿಕ್ಷೆ ತಕ್ಷಣ ಜಾರಿಯಾಗುವಂತಿದ್ದಿದ್ದರೆ ಅವರಿಗೆ ಕಾನೂನಿನ ಭಯ ಇರುತ್ತಿತ್ತು. ಆದರೆ ಅವಳನ್ನು ಕೊಂದ ಅಪರಾಧಿಗಳು ಇನ್ನೂ ಉಸಿರಾಡುತ್ತಿದ್ದಾರೆ" ಇದು ನಿರ್ಭಯಾ ತಾಯಿ ಆಶಾ ದೇವಿ ಅವರ ಮಾತುಗಳು. ಐದು ವರ್ಷದ ಹಿಂದೆ ದೆಹಲಿ ಸೇರಿ ಇಡಿಯ ದೇಶವನ್ನು ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅವರು ನ್ಯಾಯದ ನಿರೀಕ್ಷೆಯಲ್ಲಿದ್ದಾರೆ.