ಮುಂಬೈ ಅಗ್ನಿ ಅವಘಡ: ಕೂಗಿ ಹಲವರ ಜೀವ ಉಳಿಸಿದ ಅಂಧ ಮಹಿಳೆ

ನಗರದ ಖೈರಾನಿ ರಸ್ತೆಯ ಅಂಗಡಿಯೊಂದರಲ್ಲಿ ಸೋಮವಾರ ಬೆಳಗಿನ ಜಾವ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, 12 ಮಂದಿ ಸಜೀವ ದಹನವಾಗಿದ್ದಾರೆ.....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ನಗರದ ಖೈರಾನಿ ರಸ್ತೆಯ ಅಂಗಡಿಯೊಂದರಲ್ಲಿ ಸೋಮವಾರ ಬೆಳಗಿನ ಜಾವ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, 12 ಮಂದಿ ಸಜೀವ ದಹನವಾಗಿದ್ದಾರೆ. ಈ ವೇಳೆ ಅಗ್ನಿ ಆಕಸ್ಮಿಕದ ಬಗ್ಗೆ ಅರಿತ ಅಂಧ ಮಹಿಳೆ ಜೋರಾಗಿ ಕೂಗಿಕೊಂಡು ಹಲವರ ಜೀವ ಉಳಿಸಿದ್ದಾರೆ ಮತ್ತು ತನ್ನ ಮಗನಿಗೂ ಎಚ್ಚರಿಕೆ ನೀಡಿದ್ದಾರೆ.
'ಕಟ್ಟಡದ ಮುಂದಿನ ಭಾಗದಲ್ಲಿರುವ ರೂಮ್ ನಲ್ಲಿ ನಾವು ವಾಸಿಸುತ್ತಿದ್ದು, ಇಂದು ಬೆಳಗಿನ ಜಾವ 3ರಿಂದ 4 ಗಂಟೆಯ ಸುಮಾರಿಗೆ ದೊಡ್ಡ ಸದ್ದು ಕೇಳಿಬಂತು. ಇದರಿಂದ ಎಚ್ಚರಗೊಂಡ ಕಣ್ಣು ಕಾಣದ ನನ್ನ ತಾಯಿ ಆತಂಕದಿಂದ ನನ್ನನ್ನು ಎಬ್ಬಿಸಿದರು. ನಾನು ಕಳ್ಳರು ನುಗ್ಗಿರಬಹುದು ಎಂದು ಭಾವಿಸಿದೆ. ಅದೇ ಸಮಯಕ್ಕೆ ಒಂದು ಸ್ಫೋಟದ ಸದ್ದು ಕೇಳಿಸಿತು ಮತ್ತು ಅದು ಅಗ್ನಿ ಅವಘಡ ಎಂಬುದು ತಿಳಿಯಿತು. ಕೂಡಲೇ ಇಬ್ಬರು ಜೋರಾಗಿ ಕೂಗಿಕೊಂಡವೆ. ಇದರಿಂದ ಎಚ್ಚೆತ್ತುಕೊಂಡ ಕಟ್ಟಡದ ಮುಂದೆ ವಾಸಿಸುತ್ತಿದ್ದ ಐದು ಆರು ಜನ ಹೊರಕ್ಕೆ ಬಂದು ಪ್ರಾಣ ಉಳಿಸಕೊಂಡರು' ಎಂದು ಮಹಿಳೆಯ ಪುತ್ರ ತುಷಾರ್ ಪವಾರ್(27) ಅವರು ತಿಳಿಸಿದ್ದಾರೆ.
ನಾವು ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದೆವು. ಆದರೆ ಅದು ದೊಡ್ಡ ಪ್ರಮಾಣದಲ್ಲಿದ್ದರಿಂದ ನಿಯಂತ್ರಣಕ್ಕೆ ಬರಲಿಲ್ಲ. ಹೀಗಾಗಿ ಕೂಡಲೇ ಅಗ್ನಿ ಶಾಮಕಕ್ಕೆ ಮಾಹಿತಿ ನೀಡಿದೇವು ಎಂದು ತುಷಾರ್ ಹೇಳಿದ್ದಾರೆ.
ಬೆಂಕಿ ಹತ್ತಿ ಉರಿದುಕೊಳ್ಳುವಾಗ ಕಟ್ಟಡದೊಳಗೆ ನಿದ್ದೆ ಮಾಡುತ್ತಿದ್ದ 12 ಕಾರ್ಮಿಕರು ಬೆಂಕಿಗೆ ಆಹುತಿಯಾಗಿದ್ದಾರೆ. ಹೊರಗೆ ಮಲಗಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com