ಬುಲೆಟ್ ರೈಲುಗಾಗಿ ಸಾಗರದೊಳಗಿನ ಸುರಂಗ 2022ರ ವೇಳೆಗೆ ಮುಕ್ತಾಯಗೊಳ್ಳಲಿದೆ!

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಬುಲೆಟ್ ರೈಲಿನ ಮುಂಬೈ ಮತ್ತು ಥಾಣೆ ನಡುವಿನ ಸಾಗರದೊಳಗಿನ ಸುರಂಗ 2022ರ ವೇಳೆಗೆ ಮುಕ್ತಾಯಗೊಳ್ಳಲಿದೆ ಎಂದು...
ಬುಲೆಟ್ ರೈಲು ನಕ್ಷೆ
ಬುಲೆಟ್ ರೈಲು ನಕ್ಷೆ
Updated on
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಬುಲೆಟ್ ರೈಲಿನ ಮುಂಬೈ ಮತ್ತು ಥಾಣೆ ನಡುವಿನ ಸಾಗರದೊಳಗಿನ ಸುರಂಗ 2022ರ ವೇಳೆಗೆ ಮುಕ್ತಾಯಗೊಳ್ಳಲಿದೆ ಎಂದು ರಾಷ್ಟ್ರೀಯ ಹೈ ಸ್ಪೀಡ್ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಅಚಲ್ ಖೇರ್ ತಿಳಿಸಿದ್ದಾರೆ. 
2022ರ ಆಗಸ್ಟ್ 15ರೊಳಗೆ ಬುಲೆಟ್ ರೈಲು ಯೋಜನೆಯನ್ನು ಮುಗಿಸಬೇಕೆಂಬ ಗುರಿ ಹೊಂದಿದ್ದು, ಪ್ರಸ್ತುತ ಜಪಾನ್ ಜತೆಗೆ ಸಮುದ್ರದಲ್ಲಿ ಸ್ಥಿರ ವಕ್ರೀಭವನದ ಸಮೀಕ್ಷೆಯನ್ನು ನಡೆಸುತ್ತಿದ್ದೇವೆ. ಇಲ್ಲಿ ನಮಗೆ ಹೆಚ್ಚಿನ ಕಠಿಣ ಸವಾಲುಗಳು ಎದುರಾಗಿವೆ. ನಮ್ಮ ಸಮೀಕ್ಷೆ ಪ್ರಕಾರ ಸಮುದ್ರದಲ್ಲಿ 10-15 ಮೀಟರ್ ಆಳದಲ್ಲಿ 25 ರಿಂದ 40 ಮೀಟರ್ ಸುರಂಗ ನಿರ್ಮಾಣ ಮಾಡಲಿದ್ದೇವೆ. ಮುಂದಿನ ವರ್ಷ ನಮ್ಮ ಸುರಂಗ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಖೇರ್ ತಿಳಿಸಿದ್ದಾರೆ. 
ಡಿಸೆಂಬರ್ 11ರಿಂದ ಸುರಂಗ ಯೋಜನೆಗೆ ಸಂಬಂಧಿಸಿದ ದತ್ತಾಂಶ ಸಂಗ್ರಹಣೆ ಪ್ರಾರಂಭವಾಗಿದ್ದು ಡಿಸೆಂಬರ್ 24ರೊಳಗೆ ಮುಕ್ತಾಯಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಥಾಣೆ ಬಳಿ ಸರೋವರದೊಳಗೆ ಸುರಂಗವನ್ನು ನಿರ್ಮಿಸಲು ಜಪಾನ್ ಇಂಜಿನಿಯರ್ಸ್ ಹಾಗೂ ಭಾರತೀಯ ವೃತ್ತಿಪರರು ಶ್ರಮಿಸುತ್ತಿದ್ದಾರೆ ಎಂದರು. 
ಗುಜರಾತ್ ನ ಅಹ್ಮದಾಬಾದ್ ನಿಂದ ಮುಂಬೈಗೆ ಪ್ರಪ್ರಥಮ ಬುಲೆಟ್ ರೈಲು ಸಂಚಾರ ಮಾಡಲಿದ್ದು, ಎರಡು ಪ್ರಮುಖ ನಗರಗಳ ನಡುವಿನ ಸುಮಾರು 508 ಕಿ.ಮೀ ದೂರ ಬುಲೆಟ್ ರೈಲು ಓಡಲಿದೆ. ಇದರಲ್ಲಿ 21 ಕಿ.ಮೀ ದೂರದ ಸುರಂಗವನ್ನು ಸಮುದ್ರದೊಳಗೆ ನಿರ್ಮಾಣ ಮಾಡಲಿದ್ದೇವೆ. ಸುರಂಗ ನಿರ್ಮಾಣಕ್ಕಾಗಿ 3,500 ಕೋಟಿ ವೆಚ್ಚ ಅಂದಾಜು ಮಾಡಲಾಗಿದೆ. ಈ ಬೃಹತ್ ಯೋಜನೆಗೆ ಒಟ್ಟು 108 ಲಕ್ಷ ಕೋಟಿ ಹಣ ಖರ್ಚಾಗಲಿದ್ದು, ಜಪಾನ್ ಸರ್ಕಾರ ಈ ಯೋಜನೆಗಾಗಿ ಶೇ.81 ರಷ್ಟು ಅಂದರೆ ಸುಮಾರು 88 ಸಾವಿರ ಕೋಟಿ ಹಣ ಸಾಲ ನೀಡಲು ಮುಂದಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com