ಗುಜರಾತ್ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡ ಶಿವಸೇನೆಯ ಎಲ್ಲಾ 42 ಅಭ್ಯರ್ಥಿಗಳು

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಹಿಂದಿನ ಚುನಾವಣೆಗಿಂತ ಕಡಿಮೆ ಸ್ಥಾನವನ್ನು ಪಡೆದು ಅಧಿಕಾರಕ್ಕೇರಿರುವ ಬಿಜೆಪಿಯನ್ನು ಎನ್ ಡಿಎ ಮಿತ್ರ ಪಕ್ಷ ಶಿವಸೇನೆ ಟೀಕಿಸುತ್ತಿದೆ...
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
Updated on
ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಹಿಂದಿನ ಚುನಾವಣೆಗಿಂತ ಕಡಿಮೆ ಸ್ಥಾನವನ್ನು ಪಡೆದು ಅಧಿಕಾರಕ್ಕೇರಿರುವ ಬಿಜೆಪಿಯನ್ನು ಎನ್ ಡಿಎ ಮಿತ್ರ ಪಕ್ಷ ಶಿವಸೇನೆ ಟೀಕಿಸುತ್ತಿದೆ. ಆದರೆ ಶಿವಸೇನೆ ಕಣಕ್ಕಿಳಿಸಿದ್ದ ಎಲ್ಲಾ 42 ಅಭ್ಯರ್ಥಿಗಳು ಠೇವಣಿಯನ್ನೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. 
ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿ, ಒಟ್ಟಾರೆ ಚಲಾವಣೆಯಾದ ಮತಗಳ ಪೈಕಿ 6 ನೇ ಒಂದರಷ್ಟು ಮತಗಳನ್ನು ಪಡೆಯಲು ವಿಫಲವಾದರೆ ಆ ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ಪಾವತಿಸಿದ್ದ ಠೇವಣಿ ಹಣ ವಾಪಸ್ ಸಿಗುವುದಿಲ್ಲ. 
ಶಿವಸೇನೆಯ ಎಲ್ಲಾ ಅಭ್ಯರ್ಥಿಗಳು ಒಟ್ಟು 33,893 ಮತಗಳನ್ನು ಪಡೆದಿದ್ದು ಲಿಂಬಾಯತ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಿವಸೇನೆಯ ಸಾಮ್ರಾಟ್ ಪಾಟೀಲ್ ಅತಿ ಹೆಚ್ಚು ಅಂಡರೆ 4,075 ಮತಗಳನ್ನು ಪಡೆದಿದ್ದಾರೆ. 2007 ರಲ್ಲಿಯೂ ಸಹ ಗುಜರಾತ್ ನಲ್ಲಿ ಶಿವಸೇನೆಯಿಂದ ಸ್ಪರ್ಧಿಸಿದ್ದ 33 ಅಭ್ಯರ್ಥಿಗಳು ಸೋತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com