ತನ್ನನ್ನು ತಾನು ನೆಲ್ಸನ್ ಮಂಡೇಲಾ, ಅಂಬೇಡ್ಕರ್ ಗೆ ಹೋಲಿಸಿಕೊಂಡ ಲಾಲು

ಬಹುಕೋಟಿ ಮೇವು ಹಗರಣದಲ್ಲಿ ತಪ್ಪಿತಸ್ಥರಾಗಿ ಜೈಲು ಪಾಲಾಗಿರುವ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್....
ಲಾಲು ಪ್ರಸಾದ್ ಯಾದವ್
ಲಾಲು ಪ್ರಸಾದ್ ಯಾದವ್

ರಾಂಚಿ: ಬಹುಕೋಟಿ ಮೇವು ಹಗರಣದಲ್ಲಿ ತಪ್ಪಿತಸ್ಥರಾಗಿ ಜೈಲು ಪಾಲಾಗಿರುವ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ತಮ್ಮನ್ನು ತಾವು ವರ್ಣಬೇಧ ನೀತಿ ವಿರೋಧಿ ಹೋರಾಟಗಾರ ನೆಲ್ಸನ್ ಮಂಡೇಲಾ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜತೆ ಹೋಲಿಸಿಕೊಂಡಿದ್ದಾರೆ.

ತೀರ್ಪು ಪ್ರಕಟಗೊಂಡ ನಂತರ ಸರಣಿ ಟ್ವೀಟ್ ಮಾಡಿರುವ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯು ತನ್ನ ಲಾಭಕ್ಕಾಗಿ ಮತ್ತು ವೋಟ್ ಬ್ಯಾಂಕ್ ಗಾಗಿ ಪ್ರತಿಪಕ್ಷಗಳ ಬಗ್ಗೆ ಜನರಲ್ಲಿ ಅಪನಂಬಿಕೆ ಬಿತ್ತುವ ಕೆಟ್ಟ ರಾಜಕೀಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ ಎಂದು ಹೇಳಿದ್ದಾರೆ.

‘ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್ಸ್, ಬಾಬಾ ಸಾಹೇಬ್ ಅಂಬೇಡ್ಕರ್ ತಮ್ಮ ಪ್ರಯತ್ನಗಳಲ್ಲಿ ಸೋತಿದ್ದರೆ ಚರಿತ್ರೆ ಅವರನ್ನು ಖಳನಾಯಕರಾಗಿಸುತ್ತಿತ್ತು. ಅವರು ಈಗಲೂ ಕೆಲವರಿಗೆ ‌ಪೂರ್ವಗ್ರಹಗಳುಳ್ಳವರು, ಜನಾಂಗೀಯವಾದಿ, ಜಾತಿವಾದಿ ಮನಸ್ಸುಗಳಿಗೆ ಖಳನಾಯಕರಂತೆಯೇ ಕಾಣಿಸುತ್ತಾರೆ. ಅವರಿಂದ ಇದಕ್ಕಿಂತ ಭಿನ್ನವಾದುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ಲಾಲು ಟ್ವೀಟ್ ಮಾಡಿದ್ದಾರೆ.

ಲಾಲು ಪ್ರಸಾದ್ ಯಾದವ್ ಅವರು, ಬಿಜೆಪಿಯನ್ನು ಟೀಕಿಸುವ ಅಂತ್ಯ ಪ್ರಾಸವುಳ್ಳ ಕವನವೊಂದನ್ನೂ ಟ್ವೀಟ್ ಮಾಡಿದ್ದು, ‘ಕಮಲ್ ಕಾ ಫೂಲ್ ಆಲ್‌ವೇಸ್ ಬನಾವಿಂಗ್ ಏಪ್ರಿಲ್ ಫೂಲ್, ರಹ್‌ನಾ ಕೂಲ್‌ ನ ಕರ್‌ನಾ ಭೂಲ್, ಚಟ್‌ನಾ ಧೂಲ್ (ಕಮಲದ ಹೂ ಯಾವತ್ತೂ ಏಪ್ರಿಲ್ ಫುಲ್ ಆಗುತ್ತದೆ. ಸಹನೆಯಿಂದ, ಯಾವುದೇ ತಪ್ಪು ಮಾಡದೆ ಇರುವುದರಿಂದ ಮಣ್ಣುಮುಕ್ಕಿಸಬಹುದು)’ಎಂದು ಬರೆದುಕೊಂಡಿದ್ದಾರೆ.

ಇದೇ ವೇಳೆ ‘ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್ಸ್, ಬಾಬಾ ಸಾಹೇಬ್ ಅಂಬೇಡ್ಕರ್ ತಮ್ಮ ಪ್ರಯತ್ನಗಳಲ್ಲಿ ಸೋತಿದ್ದರೆ ಚರಿತ್ರೆ ಅವರನ್ನು ಖಳನಾಯಕರಾಗಿಸುತ್ತಿತ್ತು. ಅವರು ಈಗಲೂ ಕೆಲವರಿಗೆ ‌ಪೂರ್ವಗ್ರಹಗಳುಳ್ಳವರು, ಜನಾಂಗೀಯವಾದಿ, ಜಾತಿವಾದಿ ಮನಸ್ಸುಗಳಿಗೆ ಖಳನಾಯಕರಂತೆಯೇ ಕಾಣಿಸುತ್ತಾರೆ. ಅವರಿಂದ ಇದಕ್ಕಿಂತ ಭಿನ್ನವಾದುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ಲಾಲು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com