ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಬೆಂಬಲ: ಹುರಿಯತ್ ನಾಯಕ ಗಿಲಾನಿ ಪುತ್ರನಿಂದ ಎನ್ ಐಎ ಸಮನ್ಸ್ ನಿರ್ಲಕ್ಷ

ಕಾಶ್ಮೀರ ಕಣಿವೆಯಲ್ಲಿ ಶಾಂತಿ ಕದಡಲು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಿಂದ ನಿಧಿ ಸಂಗ್ರಹಿಸುವ ಆರೋಪ್ದ ತನಿಖೆಗೆ ಸಂಬಂಧಿಸಿದಂತೆ.......
ಸೈಯದ್ ಅಲಿ ಶಾ ಗಿಲಾನಿ
ಸೈಯದ್ ಅಲಿ ಶಾ ಗಿಲಾನಿ
ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ಶಾಂತಿ ಕದಡಲು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಿಂದ ನಿಧಿ ಸಂಗ್ರಹಿಸುವ ಆರೋಪ್ದ ತನಿಖೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಸಮನ್ಸ್ ನ್ನು ಹುರಿಯತ್ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಷಾ ಗಿಲಾನಿಯ ಕಿರಿಯ ಪುತ್ರ ನಸೀಮ್ ಗಿಲಾನಿ ನಿರ್ಲಕ್ಷಿಸಿದ್ದಾರೆ.
ಇಂದು ಗಿಲಾನಿ ತನಿಖೆಗೆ ಹಾಜರಾಗಲಿಲ್ಲ ಎಂದು ಎನ್ ಐ ಎ ಅಧಿಕಾರಿಗಳು ಐಎ ಎನ್ ಎಸ್ ಗೆ ತಿಳಿಸಿದ್ದಾರೆ. ಇದರ ಹೊರತಾಗಿ ಇನ್ನಾವ ಹೊಸ ಸಮನ್ಸ್ ನೀದಲಾಗುತ್ತದೆಯೆ ಎನ್ನುವ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಲು ನಿರಾಕರಿಸಿದ್ದಾರೆ.
ದಕ್ಷಿಣ ದೆಹಲಿಯ ಲೋಧಿ ರಸ್ತೆ ಕೇಂದ್ರ ಕಛೇರಿಗೆ ಹಾಜರಾಗಲು ಕಳೆದ ವಾರ ಶ್ರೀನಗರದ ಶೇರ್-ಇ-ಕಾಶ್ಮೀರ ಕೃಷಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ನಸೀಮ್ ಅವರಿಗೆ ಎನ್ ಐ ಎ ಸಮನ್ಸ್ ನಿಡಿತ್ತು.  ಇಷ್ಟೇ ಅಲ್ಲದೆ ಎನ್ಐಎ ಎರಡು ಬಾರಿ ನಸೀಮ್ ರನ್ನು ವಿಚಾರಣೆ ನಡೆಸಿದೆ. ತನಿಖಾ ದಳವು ನಸೀಮ್ ನ ಹಿರಿಯ ಸಹೋದರ ವೃತ್ತಿಯಲ್ಲಿ ವೈದ್ಯನಾಗಿರುವ ನಯೆಮ್ ನನ್ನು ಸಹ ವಿಚಾರಣೆಗೆ ಒಳಪಡಿಸಿತ್ತು..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com