ಸಶಸ್ತ್ರ ಪಡೆಗಳಲ್ಲಿ ಸುಮಾರು 60,000 ಸಿಬ್ಬಂದಿಗಳ ಕೊರತೆ ಇದೆ: ನಿರ್ಮಲಾ ಸೀತಾರಮನ್

ಸಶಸ್ತ್ರ ಪಡೆಗಳು ಸುಮಾರು 60,000 ಸಿಬ್ಬಂದಿಗಳ ಕೊರತೆಯನ್ನು ಎದುರಿಸುತ್ತಿದ್ದು, ಸೈನ್ಯದಲ್ಲಿ 27,000 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದೆ ಎಂದು ಸರ್ಕಾಅರ ಹೇಳಿದೆ.
ನಿರ್ಮಲ ಸೀತಾರಾಮನ್
ನಿರ್ಮಲ ಸೀತಾರಾಮನ್
ನವದೆಹಲಿ: ಸಶಸ್ತ್ರ ಪಡೆಗಳು ಸುಮಾರು 60,000 ಸಿಬ್ಬಂದಿಗಳ ಕೊರತೆಯನ್ನು ಎದುರಿಸುತ್ತಿದ್ದು, ಸೈನ್ಯದಲ್ಲಿ 27,000 ಕ್ಕೂ ಹೆಚ್ಚು ಹುದ್ದೆಗಳು ಖಾಲಿ  ಇದೆ ಎಂದು ಸರ್ಕಾಅರ ಹೇಳಿದೆ.
ಭೂ ಸೇನೆ , ನೌಕಾಪಡೆ ಮತ್ತು ವಾಯುಪಡೆಯ ಗಳಲ್ಲಿ ಒಟ್ಟು 9,259 ಅಧಿಕಾರಿಗಳು  ಮತ್ತು 50,363 ಕಡಿಮೆ ಶ್ರೇಣಿಯ ಸೈನಿಕರ ಕೊರತೆ ಇದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮಾನ್ ಲೋಕಸಭೆಗೆ ತಿಳಿಸಿದ್ದಾರೆ .
ಜುಲೈ 1ರ ದಿನಾಂಕದ ಆಧಾರದಲ್ಲಿ ಭೂ ಸೇನೆಯಲ್ಲಿ 12.37 ಲಕ್ಷ ಸಿಬ್ಬಂದಿನ್ ಇದ್ದಾರೆ. ಇನ್ನು ಒಟ್ಟು 27,864 ಸಿಬ್ಬಂದಿಗಳ ಕೊರತೆ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು  ಹೇಳಿದ್ದಾರೆ. 67,228 ಸಿಬ್ಬಂದಿಗಳು ಭಾರತೀಯ ನೌಕಾದಳದಲ್ಲಿದ್ದು 16,255 ಸಿಬ್ಬಂದಿಗಳ ಕೊರತೆ ಇದೆ. ಇನ್ನು ವಾಯುದಳದಲ್ಲಿ  1.55 ಲಕ್ಷ ಸಿಬ್ಬಂದಿಗಳಿದ್ದು ಅಲ್ಲಿ ಸಹ 15,503 ಸಿಬ್ಬಂದಿಗಳ ಕೊರತೆ ಇದೆ ಎಂದು ಸಚಿವರು ಮಾಹಿತಿ ನಿಡಿದ್ದಾರೆ.
"ಸಶಸ್ತ್ರ ಪಡೆಗಳಲ್ಲಿನ ನೇಮಕಾತಿ ನಿರಂತರ ಪ್ರಕ್ರಿಯೆಯಾಗಿದ್ದು, ಸಿಬ್ಬಂದಿ ಕೊರತೆಯನ್ನು ತಗ್ಗಿಸಲು ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ" ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
"2014-15 ರಿಂದ ಐ ಎ ಎಫ್ ನ ಮಿಗ್ ಫೈಟರ್ ಜೆಟ್ ಗಳು 10 ಬಾರಿ ಅಪಘಾತಕ್ಕೀಡಾಗಿವೆ" ಸಚಿವರು ಇದೇ ವೇಳೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com