ಕುಲಭೂಷಣ್ ಜಾಧವ್, ರಾ, ಪಾಕಿಸ್ತಾನ
ದೇಶ
ಕುಲಭೂಷಣ್ ಜಾಧವ್ ನಮ್ಮ ಸಂಸ್ಥೆಯ ವ್ಯಕ್ತಿಯಲ್ಲ, ಬಿಡುಗಡೆ ಕಷ್ಟ ಸಾಧ್ಯ: ರಾ
ಗೂಢಚಾರಿಕೆ ಆರೋಪದಡಿ ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾಗಿರುವ ಕುಲಭೂಷಣ್ ಜಾಧವ್ ನಮ್ಮ ಸಂಸ್ಥೆಗೆ ಸೇರಿದ ವ್ಯಕ್ತಿಯಲ್ಲ ಎಂದು ಭಾರತದ ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್ (ರಾ.) ಹೇಳಿದೆ.
ನವದೆಹಲಿ: ಗೂಢಚಾರಿಕೆ ಆರೋಪದಡಿ ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾಗಿರುವ ಕುಲಭೂಷಣ್ ಜಾಧವ್ ನಮ್ಮ ಸಂಸ್ಥೆಗೆ ಸೇರಿದ ವ್ಯಕ್ತಿಯಲ್ಲ ಎಂದು ಭಾರತದ ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್ (ರಾ.) ಹೇಳಿದೆ.
ಕಳೆದ 2 ವರ್ಷಗಳಿಂದ ಕುಲಭೂಷಣ್ ಜಾಧವ್ ಭಾರತದ ರಾ ಏಜೆಂಟ್ ಹೌದೋ ಅಲ್ಲವೋ ಎಂಬ ಪ್ರಶ್ನೆಯನ್ನು ರಾ ಸಂಸ್ಥೆ ಎದುರಿಸುತ್ತಿದ್ದು, ಈಗ ಜಾಧವ್ ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಬೆನ್ನಲ್ಲೇ ರಾ ಸಂಸ್ಥೆ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿಕೆ ನೀಡಿದ್ದು, ಜಾಧವ್ ಎಂದಿಗೂ ರಾ ಸಂಸ್ಥೆಯ ಭಾಗವಾಗಿರಲಿಲ್ಲ, ಅಷ್ಟೇ ಏಕೆ ರಾಗೂ ಜಾಧವ್ ಗೂ ಸಂಬಂಧವೇ ಇರಲಿಲ್ಲ ಎಂದು ಹೇಳಿದ್ದು, ಜಾಧವ್ ಅವರ ದ್ವಿಪೌರತ್ವ ಹಾಗೂ ಇನ್ನಿತರ ದಾಖಲೆಗಳು ಲೋಪದೋಷಗಳಂತೆ ಕಾಣುತ್ತಿದ್ದು, ಜಾಧವ್ ವಾಪಸ್ ಬರುವುದು ಕಷ್ಟ ಸಾಧ್ಯ ಎಂದು ರಾ ಅಭಿಪ್ರಾಯಪಟ್ಟಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ