ಕುಲಭೂಷಣ್ ಜಾಧವ್
ಕುಲಭೂಷಣ್ ಜಾಧವ್

ಪಾಕ್ ಹೈಕಮಿಷನ್ ಗೆ ಚಪ್ಪಲಿ ಕಳುಹಿಸಿದ ಬಿಜೆಪಿ ನಾಯಕ

ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಪತ್ನಿಯ....
ನವದೆಹಲಿ: ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಪತ್ನಿಯ ಶೂ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿರುವ ಪಾಕ್ ನಡೆಯನ್ನು ಖಂಡಿಸಿ ದೆಹಲಿ ಬಿಜೆಪಿ ನಾಯಕರೊಬ್ಬರು ಪಾಕ್ ಹೈಕಮಿಷನ್ ಗೆ ಚಪ್ಪಲಿ ರವಾನಿಸಿದ್ದಾರೆ.
ದೆಹಲಿ ಬಿಜೆಪಿ ವಕ್ತಾರ ತೇಜೇಂದ್ರ ಪಾಲ್ ಸಿಂಗ್ ಅವರು ಆನ್ ಲೈನ್ ಮೂಲಕ ಚಪ್ಪಲಿ ಖರೀದಿಸಿ, ಡೆಲಿವರಿಗಾಗಿ ಪಾಕಿಸ್ತಾನ ಹೈಕಮಿಷನ್ ವಿಳಾಸ ನೀಡಿದ್ದಾರೆ.
ಪಾಕಿಸ್ತಾನಕ್ಕೆ ನಮ್ಮ ಚಪ್ಪಲಿ ಬೇಕಾಗಿದೆ. ಹೀಗಾಗಿ ಅವರಿಗೆ ಚಪ್ಪಲಿ ಕಳುಹಿಸಿದ್ದೇನೆ. ಚಪ್ಪಲಿ ಖರೀದಿಸಿ, ಪಾಕಿಸ್ತಾನ ಹೈಕಮಿಷನ್ ಗೆ ರವಾನಿಸಿರುವುದಾಗಿ ಸಿಂಗ್ ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನದ ಅಧಿಕಾರಿಗಳು ಕಳೆದ ಸೋಮವಾರ ಜಾಧವ್ ಭೇಟಿಗೆ ತೆರಳಿದ್ದ ಅವರ ತಾಯಿ ಮತ್ತು ಪತ್ನಿಯ ಬಿಂದಿ, ಮಂಗಳಸೂತ್ರ ಹಾಗೂ ಚಪ್ಪಲಿಯನ್ನು ತೆಗೆಸಿದ್ದರು. ಇದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.

X

Advertisement

X
Kannada Prabha
www.kannadaprabha.com