ವಾಯುಪಡೆಯ ಮಿಗ್-27 ಎಂಎಲ್ 'ಬಹದ್ದೂರ್' ಯುದ್ಧ ವಿಮಾನಕ್ಕೆ ವಿದಾಯ

ದಶಕಗಳಿಂದ ಭಾರತೀಯ ವಾಯುಪಡೆಯ ಸಂಗಾತಿಯಾಗಿದ್ದ ಮಿಗ್-27 ಎಂಎಲ್ ಬಹದ್ದೂರ್ ಹೆಸರಿನ ವಿಮಾನಕ್ಕೆ ವಿದಾಯ ಹೇಳಲಾಗಿದೆ...
ಮಿಗ್-27 ಎಂಎಲ್ ಬಹದ್ದೂರ್
ಮಿಗ್-27 ಎಂಎಲ್ ಬಹದ್ದೂರ್
ಕೋಲ್ಕತ್ತಾ: ದಶಕಗಳಿಂದ ಭಾರತೀಯ ವಾಯುಪಡೆಯ ಸಂಗಾತಿಯಾಗಿದ್ದ ಮಿಗ್-27 ಎಂಎಲ್ ಬಹದ್ದೂರ್ ಹೆಸರಿನ ವಿಮಾನಕ್ಕೆ ವಿದಾಯ ಹೇಳಲಾಗಿದೆ. 
ಕೋಲ್ಕತ್ತಾದ ಹಸೀಮರಾ ವಾಯು ನೆಲೆಯಲ್ಲಿ ಶುಕ್ರವಾರ ಸಂಜೆ ನಡೆದ ಸರಳ ಸಮಾರಂಭದ ವೇಳೆ ತನ್ನ ಕೊನೆಯ ಹಾರಾಟ ನಡೆಸಿದ ಬಹದ್ದೂರ್ ಗೆ ನಿವೃತ್ತಿ ನೀಡಲಾಯಿತು. 
1980ರ ದಶಕದಲ್ಲಿ ವಾಯುಸೇನೆಗೆ ಸೇರ್ಪಡೆಗೊಂಡ ರಷ್ಯಾ ನಿರ್ಮಿತ ಮಿಗ್-27 ಎಂಎಲ್ ಬಹದ್ದೂರ್ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಹೆಗ್ಗಳಿಕೆಗೆ ಪಾತ್ರವಾಗಿದೆ. 
ಇನ್ನು ಈ ಬಹದ್ದೂರ್ ಯುದ್ಧ ವಿಮಾನಕ್ಕೆ ಬಾಂಬ್, ರಾಕೆಟ್ ಹಾಗೂ ವಿಧ್ವಂಸಕಾರಿ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವಿತ್ತು. ಇವುಗಳನ್ನು ನಿರ್ವಹಿಸಲು ಬೇಕಾದ ಕಂಪ್ಯೂಟರ್ ತಂತ್ರಜ್ಞಾನವೂ ಇತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com