ಹಫೀಜ್ ಸಯೀದ್ ಕಾರ್ಯಕ್ರಮದಲ್ಲಿ ಪ್ಯಾಲೆಸ್ತೇನ್ ನ ರಾಯಭಾರಿ: ಪಾಕಿಸ್ತಾನದಿಂದ ಸಮರ್ಥನೆ

ಪಾಕಿಸ್ತಾನದ ಉಗ್ರ ಹಫೀಜ್ ಸಯೀದ್ ಕಾರ್ಯಕ್ರಮದಲ್ಲಿ ಪ್ಯಾಲೆಸ್ತೇನ್ ನ ರಾಯಭಾರಿ ಭಾಗಿಯಾಗಿದ್ದನ್ನು ಪಾಕಿಸ್ತಾನ ಸಮರ್ಥಿಸಿಕೊಂದಿದೆ.
ಹಫೀಜ್ ಸಯೀದ್
ಹಫೀಜ್ ಸಯೀದ್
Updated on
ಪಾಕಿಸ್ತಾನದ ಉಗ್ರ ಹಫೀಜ್ ಸಯೀದ್ ಕಾರ್ಯಕ್ರಮದಲ್ಲಿ ಪ್ಯಾಲೆಸ್ತೇನ್ ನ ರಾಯಭಾರಿ ಭಾಗಿಯಾಗಿದ್ದನ್ನು ಪಾಕಿಸ್ತಾನ ಸಮರ್ಥಿಸಿಕೊಂದಿದೆ. ಪ್ಯಾಲೆಸ್ತೇನ್ ಗೆ ಬೆಂಬಲ ಘೋಷಿಸಿ ನಡೆದ ಕಾರ್ಯಕ್ರಮದಲ್ಲಿ ಹಫೀಜ್ ಸಯೀದ್ ಭಾಗವಹಿಸಿದ್ದನ್ನು ಸಮರ್ಥಿಸಿಕೊಂಡಿರುವ ಪಾಕಿಸ್ತಾನ, ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧವಾಗಿ ಯಾವುದೇ ನಿರ್ಬಂಧಗಳಿಲ್ಲ ಎಂದು ಹೇಳಿದೆ. 
ಉಗ್ರ ಹಫೀಜ್ ಸಯೀದ್ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಪ್ಯಾಲೆಸ್ತೇನ್ ನ ರಾಯಭಾರಿಯನ್ನು ಪ್ಯಾಲೆಸ್ತೇನ್ ವಾಪಸ್ ಕರೆಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಇಲಾಖೆ ಅಧಿಕಾರಿ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧವಾಗಿ ಯಾವುದೇ ನಿರ್ಬಂಧಗಳಿಲ್ಲ ಎಂದು ಹೇಳಿದ್ದಾರೆ. 
ಪಾಕಿಸ್ತಾನದ ಜನತೆ ಹಾಗೂ ಸರ್ಕಾರ ಪ್ಯಾಲೆಸ್ತೇನ್ ನ ರಾಯಭಾರಿ ಪ್ಯಾಲೆಸ್ತೇನ್ ಪರವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದನ್ನು ಬೆಂಬಲಿಸುತ್ತಾರೆ. ಜೆರುಸಲೇಮ್ ವಿವಾದದಲ್ಲಿ ಪಾಕಿಸ್ತಾನ ಯಾವಾಗಲೂ ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ಎರಡೂ ರಾಷ್ಟ್ರಗಳಿಗೆ ಒಪ್ಪಿಗೆಯಾಗುವಂತಹ ಪರಿಹಾರಕ್ಕೆ ಬೆಂಬಲ ಸೂಚಿಸಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com