ಪಂಜಾಬ್, ಗೋವಾ ಚುನಾವಣೆ: ಫೆ.3, 4ರಂದು ಮಾಧ್ಯಮಗಳಲ್ಲಿ ರಾಜಕೀಯ ಜಾಹೀರಾತು ಪ್ರಕಟಕ್ಕೆ ನಿರ್ಬಂಧ

ಮುಂಬರುವ ಐದು ವಿಧಾನಸಭಾ ಕ್ಷೇತ್ರಗಳ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಯಾವುದೇ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ:  ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಸಂಘಟನೆಗಳು ಅಥವಾ ವ್ಯಕ್ತಿ ಫೆಬ್ರವರಿ 3 ಮತ್ತು 4ರಂದು ಮುದ್ರಣ ಮಾಧ್ಯಮದಲ್ಲಿ ಜಾಹೀರಾತುಗಳನ್ನು ಪ್ರಕಟಿಸಬಾರದೆಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ಮಾಧ್ಯಮ ಪ್ರಮಾಣೀಕರಣ ಮತ್ತು ಉಸ್ತುವಾರಿ ಸಮಿತಿ(ಎಂಸಿಎಂಸಿ)ಯಿಂದ ಪೂರ್ವ ಪ್ರಮಾಣಿತ ಪಡೆದ ಜಾಹೀರಾತುಗಳನ್ನು ಮಾತ್ರ ಪ್ರಕಟಿಸಬಹುದೆಂದು ಹೇಳಿದೆ.
ಈ ಹಿಂದೆ ಇಂತಹ ಅನೇಕ ಜಾಹೀರಾತುಗಳು ಜನರನ್ನು ತಪ್ಪು ದಾರಿಗೆಳೆಯುವುದು ಚುನಾವಣಾ ಆಯೋಗದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಆದೇಶ ನೀಡಿದೆ.
ಆಯೋಗ ಗೋವಾ ಮತ್ತು ಪಂಜಾಬ್ ನ ಎಲ್ಲಾ ಪತ್ರಿಕೆಗಳಿಗೂ ಇಂತಹದೇ ಆದೇಶ ಹೊರಡಿಸಿ, ಮಾಧ್ಯಮ ಪ್ರಮಾಣೀಕರಣ ಮತ್ತು ಉಸ್ತುವಾರಿ ಸಮಿತಿಯಿಂದ ಪೂರ್ವ ಪ್ರಮಾಣಿತ ಪಡೆಯದ ಯಾವುದೇ ಜಾಹೀರಾತುಗಳನ್ನು ಫೆಬ್ರವರಿ 3 ಮತ್ತು 4ರಂದು ಪ್ರಕಟಿಸದಂತೆ ಹೇಳಿದೆ.
ಪೂರ್ವ ಪ್ರಮಾಣಿತ ಪಡೆದುಕೊಳ್ಳಬಯಸುವ ಜಾಹೀರಾತುಗಳನ್ನು ಪರೀಕ್ಷಿಸಿ ಅನುಮತಿ ನೀಡಬೇಕೆಂದು ಕೂಡ ಚುನಾವಣಾ ಆಯೋಗ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com