ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣ: ಮಾರನ್ ಸಹೋದರರ ಖುಲಾಸೆ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಇಡಿ

ಏರ್ ಸೆಲ್- ಮ್ಯಾಕ್ಸಿಸ್ ಕೇಸಿನಲ್ಲಿ ದಯಾನಿಧಿ ಮಾರನ್ ಸೋದರರು ಮತ್ತು ಇತರ ಆರೋಪಿಗಳನ್ನು...
ದಯಾನಿಧಿ ಮಾರನ್
ದಯಾನಿಧಿ ಮಾರನ್
ನವದೆಹಲಿ: ಏರ್ ಸೆಲ್- ಮ್ಯಾಕ್ಸಿಸ್ ಕೇಸಿನಲ್ಲಿ ದಯಾನಿಧಿ ಮಾರನ್ ಸೋದರರು ಮತ್ತು ಇತರ ಆರೋಪಿಗಳನ್ನು ಖುಲಾಸೆಗೊಳಿಸಿ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪಿಗೆ ವಿರುದ್ಧವಾಗಿ ಜಾರಿ ನಿರ್ದೇಶನಾಲಯ ಶುಕ್ರವಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಏರ್ ಸೆಲ್-ಮ್ಯಾಕ್ಸಿಸ್ ಕೇಸಿಗೆ ಸಂಬಂಧಪಟ್ಟ ವಸ್ತುಗಳನ್ನು ಬಿಡುಗಡೆ ಮಾಡದಂತೆ ಕೂಡ ಜಾರಿ ನಿರ್ದೇಶನಾಲಯ ಸುಪ್ರೀಂ ಕೋರ್ಟ್ ನ್ನು ಒತ್ತಾಯಿಸಿದೆ.
ಮಾರನ್ ಸಹೋದರರು ಲಗತ್ತಿಸಿರುವ ಬಾಂಡ್ ಗಳನ್ನು ಕೂಡ ಸ್ವೀಕರಿಸದಂತೆ ವಿಶೇಷ 2ಜಿ ಕೋರ್ಟ್ ಆದೇಶ ನೀಡಬೇಕೆಂದು ಹೇಳಿದ್ದಾರೆ. 
ಸರಿಯಾದ ಅರ್ಜಿ ಸಲ್ಲಿಸುವಂತೆ ನಿರ್ದೇಶನಾಲಯಕ್ಕೆ ಸೂಚಿಸಿರುವ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಇಂದು ಮಧ್ಯಾಹ್ನ 2 ಗಂಟೆಗೆ ಮುಂದೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com