ವಿಮಾನ
ವಿಮಾನ

2016ರಲ್ಲಿ ದಾಖಲಾಯ್ತು, 422 ವಾಯು ಸುರಕ್ಷತಾ ನಿಯಮಗಳ ಉಲ್ಲಂಘನೆ

2016ರಲ್ಲಿ ಒಟ್ಟಾರೆ ಕುಡಿದು ವಿಮಾನ ಹಾರಿಸಿದ ಹಾಗೂ ಇತರ ಸುರಕ್ಷತಾ ನಿಯಮಗಳ ಉಲ್ಲಂಘಣೆ ಸಂಬಂಧ 422 ಪ್ರಕರಣಗಳು ದಾಖಲಾಗಿವೆ ಎಂದು ನಾಗರಿಕ...
ನವದೆಹಲಿ: 2016ರಲ್ಲಿ ಒಟ್ಟಾರೆ ಕುಡಿದು ವಿಮಾನ ಹಾರಿಸಿದ ಹಾಗೂ ಇತರ ಸುರಕ್ಷತಾ ನಿಯಮಗಳ ಉಲ್ಲಂಘಣೆ ಸಂಬಂಧ 422 ಪ್ರಕರಣಗಳು ದಾಖಲಾಗಿವೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಹೇಳಿದೆ. 
ಡಿಜಿಸಿಎ ಪ್ರಕಾರ 422 ಪ್ರಕರಣಗಳು ದಾಖಲಾಗಿದ್ದು, ಈ ಸಂಬಂಧ ಸಿಬ್ಬಂದಿ ಸೇರಿದಂತೆ 272 ಪೈಲಟ್ ಗಳನ್ನು ವಜಾ ಮಾಡಲಾಗಿದೆ. ಇದರಲ್ಲಿ 42 ಪೈಲಟ್ಸ್ ಗಳ ಕೆಲಸದಿಂದ ಕಿತ್ತು ಹಾಕಿದ್ದು, 108 ಪೈಲಟ್ ಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ. 
2016ರಲ್ಲಿ ಸ್ಪೈಸ್ ಜೆಟ್ ವಿಮಾನಯಾನದ ಸಂಸ್ಥೆ ಸೇರಿದವರು ಹೆಚ್ಚಾಗಿ ಅಮಾನತುಗೊಂಡಿದ್ದಾರೆ. ಜೆಟ್ ವಿಮಾನಯಾನ ಸಂಸ್ಥೆ ಪ್ರಕಾರ 53 ಸಿಬ್ಬಂದಿ, ಇಂಡಿಗೋ ಸಂಸ್ಥೆಗೆ ಸೇರಿದ ಸಿಬ್ಬಂದಿ ಮತ್ತು ಪೈಲಟ್ ಸೇರಿದಂತೆ 41 ಜನರು ಅಮಾನತುಗೊಂಡಿದ್ದಾರೆ.
2015ರಲ್ಲಿ ಒಟ್ಟು 275 ಕಾಕ್ ಪಿಟ್ ಮತ್ತು ವಿಮಾನ ಸಿಬ್ಬಂದಿ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗಿತ್ತು. ಹಿಂದಿನ ವರ್ಷಕ್ಕೆ ಹೊಲಿಸಿದರೇ ಈ ಬಾರಿ ಈ ಪ್ರಮಾಣ ಶೇಖಡ 54ರಷ್ಟು ಹೆಚ್ಚಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com