ಭಾರತದಲ್ಲಿದ್ದಾರೆ ಬರೋಬ್ಬರೀ 12 ಲಕ್ಷ ನಕಲಿ ವಕೀಲರು

ದೇಶದಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ 20 ಲಕ್ಷ ವಕೀಲರಲ್ಲಿ ಶೇ. 60 ರಷ್ಟು ಅಂದರೆ 12 ಲಕ್ಷ ನಕಲಿ ಲಾಯರ್ ಗಳಿದ್ದಾರೆ ಎಂಬ ಮಾಹಿತಿ ತಿಳಿದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ 20 ಲಕ್ಷ ವಕೀಲರಲ್ಲಿ ಶೇ. 60 ರಷ್ಟು ಅಂದರೆ 12 ಲಕ್ಷ ನಕಲಿ ಲಾಯರ್ ಗಳಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ನಕಲಿ ವಕೀಲರನ್ನು ಕಿತ್ತು ಹಾಕಿ ವ್ಯವಸ್ಥೆಯನ್ನು ಸದೃಢಗೊಳಿಸಲು ಪ್ರತಿ ಐದು ವರ್ಷಗಳಿಗೊಮ್ಮೆ ವಕೀಲರು ತಮ್ಮ ಪರವಾನಗಿ ನವೀಕರಣ ಗೊಳಿಸಿಕೊಳ್ಳಬೇಕು ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಆದೇಶ ಹೊರಡಿಸಿದೆ. ಲಾ ಪ್ರಾಕ್ಟೀಸ್ ಮಾಡುತ್ತಿರುವ ವಕೀಲರಿಂದ ನೋಂದಣಿ ಶುಲ್ಕ ಪಡೆದು ವಕೀಲರ ವಿಶ್ವ ವಿದ್ಯಾನಿಲಯ ಹಾಗೂ ಪದವಿ ಕಾಲೇಜುಗಳ ಪರಿಶೀಲನೆ ನಡೆಸುವಂತೆ ರಾಜ್ಯ ಬಾರ್ ಕೌನ್ಸಿಲ್ ಗಳಿಗೆ ಬಿಸಿಐ ನಿರ್ದೇಶನ ನೀಡಿದೆ.

ಕೋರ್ಟಿನಲ್ಲಿ ಕೆಲಸ ಮಾಡುತ್ತಿರುವ ಹಲವು ವಕೀಲರ ಬಳಿ ಸರಿಯಾದ ಪ್ರಮಾಣ ಪತ್ರಗಳಿಲ್ಲ ಎಂಬುದು ಬಾರ್ ಕೌನ್ಸಿಲ್ ಗೆ ತಿಳಿದು ಬಂದಿದೆ. ದೇಶದಲ್ಲಿರುವ ಒಟ್ಟು ವಕೀಲರಲ್ಲಿ ಶೇ 30ರಷ್ಟು  ಮಂದಿ ನಕಲಿಗಳು. ಅವರಲ್ಲಿ ಬಹುತೇಕರು ನಕಲಿ ಕಾನೂನು ಪದವಿಗಳನ್ನು ಹೊಂದಿದ್ದಾರೆ ಎಂದು ಕಳೆದ ವರ್ಷ ಬಾರ್ ಕೌನ್ಸಿಲ್ ಸುಪ್ರೀಂ ಕೋರ್ಟ್ ಗೆ ಹೇಳಿತ್ತು.

ಪ್ರತಿ ವಕೀಲನಿಗೆ ನೋಂದಣಿ ಮಾಡಿಸಿಕೊಳ್ಳಲು 2,500 ರು ಶುಲ್ಕ ವಿಧಿಸುವಂತೆ ಬಿಸಿಐ ರಾಜ್ಯಗಳ ಬಾರ್ ಕೌನ್ಸಿಲ್ ಗೆ ಸೂಚಿಸಿದೆ. ಹೊಸ ಮಾರ್ಗ ಸೂಚಿಯಡಿ ಪ್ರತಿ ವಕೀಲನ ತನ್ನ ಪದವಿ ಪ್ರಮಾಣ ಪತ್ರಗಳನ್ನು ರಾಜ್ಯ ಬಾರ್ ಕೌನ್ಸಿಲ್ ಗೆ ಸಲ್ಲಿಸಬೇಕು ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com