ಲಂಚ ಸ್ವೀಕಾರ ಕುರಿತು ಹೇಳಿಕೆ: ಮನೋಹರ್ ಪರಿಕ್ಕರ್ ಗೆ ಚುನಾವಣಾ ಆಯೋಗದ ನೊಟೀಸ್

ಗೋವಾದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಲಂಚ ಹೇಳಿಕೆ ನೀಡಿದ್ದಕ್ಕಾಗಿ ಚುನಾವಣಾ ಆಯೋಗ ರಕ್ಷಣಾ ಸಚಿವ...
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್
ನವದೆಹಲಿ: ಗೋವಾದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಲಂಚ ಹೇಳಿಕೆ ನೀಡಿದ್ದಕ್ಕಾಗಿ ಚುನಾವಣಾ ಆಯೋಗ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರಿಗೆ ಶೋಕಾಸ್ ನೊಟೀಸ್ ಜಾರಿಗೊಳಿಸಿದ್ದು ಫೆಬ್ರವರಿ 9ರೊಳಗೆ ಉತ್ತರಿಸುವಂತೆ ಹೇಳಿದೆ.
ಸಿಡಿಯನ್ನು ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡಿಲ್ಲ ಎಂದು 9ರೊಳಗೆ ಪ್ರತಿಕ್ರಿಯೆ ನೀಡುವಂತೆ ಹೇಳಿದ್ದಾರೆ.
ಗೋವಾ ಫಾರ್ವರ್ಡ್ ಪಕ್ಷ ಮತ್ತು ಆಮ್ ಆದ್ಮಿ ಪಕ್ಷಗಳ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ ದೂರಿನ ಅನ್ವಯ ಸಮೀಕ್ಷಾ ತಂಡ ಫೆಬ್ರವರಿ 2ರಂದು ಪರಿಕ್ಕರ್ ಗೆ ನೊಟೀಸ್ ಜಾರಿ ಮಾಡಿತ್ತು. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪರಿಕ್ಕರ್ ಅವರು ಜನರಿಗೆ ಲಂಚ ಸ್ವೀಕರಿಸುವಂತೆ ಪ್ರಚೋದನೆ ನೀಡಿದ್ದರು ಎಂದು ಆಯೋಗ ಆರೋಪಿಸಿತ್ತು.
ಜನವರಿ 29ರಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಪ್ರಚಾರ ಭಾಷಣದಲ್ಲಿ, ಜನರು ಬೇರೆ ಪಕ್ಷಗಳಿಂದ ಲಂಚ ಸ್ವೀಕರಿಸಿ, ಆದರೆ ಕಮಲದ ಚಿಹ್ನೆಗೆ ಮತ ಹಾಕಿ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com