ಸಾರ್ವಜನಿಕ ಹಣ ಪೋಲು; ಗಂಗೆಯ ಒಂದೇ ಒಂದು ಹನಿಯೂ ಆಗಿಲ್ಲ ಸ್ವಚ್ಛ: ಎನ್ ಜಿಟಿ

ಗಂಗಾ ನದಿಯ ಒಂದೇ ಒಂದು ಹನಿ ನೀರೂ ಸಹ ಸ್ವಚ್ಛವಾಗಿಲ್ಲ. ಸಾರ್ವಜನಿಕ ಹಣ ಪೋಲಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ.
ಸಾರ್ವಜನಿಕ ಹಣ ಪೋಲು, ಗಂಗೆಯ ಒಂದೇ ಒಂದು ಹನಿಯೂ ಆಗಿಲ್ಲ ಸ್ವಚ್ಛ: ಎನ್ ಜಿಟಿ
ಸಾರ್ವಜನಿಕ ಹಣ ಪೋಲು, ಗಂಗೆಯ ಒಂದೇ ಒಂದು ಹನಿಯೂ ಆಗಿಲ್ಲ ಸ್ವಚ್ಛ: ಎನ್ ಜಿಟಿ
ನವದೆಹಲಿ: ಗಂಗಾ ನದಿಯ ಒಂದೇ ಒಂದು ಹನಿ ನೀರೂ ಸಹ ಸ್ವಚ್ಛವಾಗಿಲ್ಲ. ಸಾರ್ವಜನಿಕ ಹಣ ಪೋಲಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ. 
ನದಿ ನೀರು ಸ್ವಚ್ಛತೆ ಹೆಸರಿನಲ್ಲಿ ಕೇವಲ ಸಾರ್ವಜನಿಕ ಹಣವನ್ನು ವ್ಯರ್ಥ ಮಾಡಲಾಗಿದೆ ಎಂದಿರುವ ಎನ್ ಜಿಟಿ, ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ನಮಾಮಿ ಗಂಗೆ ಯೋಜನೆಯನ್ನು ಹೇಗೆ ಜಾರಿಗೊಳಿಸುತ್ತಿದ್ದೀರಿ ಎಂದು ಕೇಳಿದ್ದು, ಉತ್ತರ ಪ್ರದೇಶ-ಕೇಂದ್ರ ಸರ್ಕಾರದ ನಡುವಿನ ದೂರುಗಳನ್ನು ಹೇಳುತ್ತಾ ನಾಟಕ ಮಾಡಬೇಡಿ ಎಂದು ಸರ್ಕಾರಿ ಸಂಸ್ಥೆಗಳಿಗೆ ಎಚ್ಚರಿಸಿದೆ. 
ನ್ಯಾ ಸ್ವತಂತ್ರ ಕುಮಾರ್ ಅವರಿದ್ದ ಪೀಠ, ಗಂಗಾ ನದಿ ನೀರನ್ನು ಸ್ವಚ್ಛಗೊಳಿಸುವ ಯೋಜನೆಯಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಸರ್ಕಾರಿ ಸಂಸ್ಥೆಗಳಿಗೆ ಸೂಚಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ನಿಮಗೆ ಗುರಿ ನೀಡಿದ್ದಾರೆ. ಅದನ್ನು ರಾಷ್ಟ್ರೀಯ ಯೋಜನೆಯಾಗಿ ಸ್ವೀಕರಿಸಿ ಎಂದು ಹೇಳಿದ್ದಾರೆ. 
ಗಂಗಾ ನದಿ ನೀರು ಸ್ವಚ್ಛವಾಗದೇ ಇರುವುದು ಸಿಪಿಸಿಬಿ( ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ) ಹಾಗೂ ಇತರ ಸರ್ಕಾರಿ ಸಂಸ್ಥೆಗಳ ವೈಫಲ್ಯ ಎಂದು ಹೇಳಿರುವ ನ್ಯಾಯಪೀಠ, ಸರ್ಕಾರಿ ಸಂಸ್ಥೆಗಳ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದ್ದರೆ ನೀವು ಕೋರ್ಟ್ ಮುಂದೆ ನಿಲ್ಲುವ ಅಗತ್ಯವಿರಲಿಲ್ಲ. ಗಂಗಾ ನದಿ ನೀರು ಸ್ವಚ್ಛತೆಗಾಗಿ ನೀವು ಏನನ್ನೂ ಮಾಡಿಲ್ಲ. ಸಾರ್ವಜನಿಕ ಹಣ ವ್ಯರ್ಥವಾಗಿದೆ. ಗಂಗಾ ನದಿಯನ್ನು ಸ್ವಚ್ಛಗೊಳಿಸಲಾಗುತ್ತಿದೆ ಎಂದು ಪ್ರತಿಯೊಬ್ಬರೂ ಹೇಳುತ್ತಾರೆ ಆದರೆ ಒಂದೇ ಒಂದು ಹನಿ ಸಹ ಸ್ವಚ್ಛವಾಗಿಲ್ಲ ಎಂದು ನ್ಯಾ.ಸ್ವತಂತ್ರ ಕುಮಾರ್ ಹೇಳಿದ್ದಾರೆ. 
ಕೇಂದ್ರ ಸರ್ಕಾರ ನಮಾಮಿ ಗಂಗೆ ಯೋಜನೆಯಡಿಯಲ್ಲಿ ಗಂಗಾ ನದಿ ಸ್ವಚ್ಛತೆಗಾಗಿ 2,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಇನ್ನು ವಿಚಾರಣೆ ವೇಳೆ ನ್ಯಾಯಮಂಡಳಿ ಗಂಗಾ ನದಿ ಪ್ರದೇಶದಲ್ಲಿ ಕೈಗಾರಿಕೆಗಳನ್ನು ನಡೆಸುತ್ತಿರುವ 14 ಸಂಸ್ಥೆಗಳಿಗೂ ಗಂಗಾ ನದಿಯನ್ನು ಕಲುಶಿತಗೊಳಿಸದಂತೆ ಎಚ್ಚರಿಕೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com