ಎಐಎಡಿಎಂಕೆ ಒಳಗಿನ ರಾಜಕೀಯ ಕಿತ್ತಾಟದಲ್ಲಿ ನಮ್ಮ ಪಾತ್ರವಿಲ್ಲ: ಡಿಎಂಕೆ ನಾಯಕಿ ಕನ್ನಿಮೋಳಿ

ಒ.ಪನ್ನೀರ್ ಸೆಲ್ವಂ ಅವರು ತಮ್ಮ ವಿರುದ್ಧ ದಂಗೆಯೇಳಲು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರೇ ...
ಡಿಎಂಕೆ ನಾಯಕಿ ಕನ್ನಿಮೋಳಿ
ಡಿಎಂಕೆ ನಾಯಕಿ ಕನ್ನಿಮೋಳಿ
Updated on
ಚೆನ್ನೈ: ಒ.ಪನ್ನೀರ್ ಸೆಲ್ವಂ ಅವರು ತಮ್ಮ ವಿರುದ್ಧ ದಂಗೆಯೇಳಲು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರೇ ಕಾರಣ ಎಂಬ ವಿ,ಕೆ.ಶಶಿಕಲಾ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಎಂಕೆ ನಾಯಕಿ ಕನ್ನಿಮೋಳಿ, ಈ ವಿಷಯದಲ್ಲಿ ಡಿಎಂಕೆ ಪಕ್ಷ ರಾಜಕೀಯ ಮಾಡುತ್ತಿಲ್ಲ, ನಮ್ಮ ಅಧ್ಯಕ್ಷರು ಅದನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆ ಜೊತೆಗೆ ಮಾತನಾಡಿದ ಅವರು, ತಮಿಳು ನಾಡಿನ ಮುಖ್ಯಮಂತ್ರಿ ಯಾರಾಗಬೇಕೆಂಬ ವಿಷಯದಲ್ಲಿ ನಮ್ಮ ಪಕ್ಷ ಮಧ್ಯ ಪ್ರವೇಶಿಸಿಲ್ಲ ಎಂದು ಹೇಳಿದರು.
ಪಕ್ಷದ ಶಾಸಕರಿಗೆ ತಮ್ಮ ನಿಲುವನ್ನು ವ್ಯಕ್ತಡಿಸಲು ಮುಕ್ತ ಅವಕಾಶಗಳಿರಬೇಕೆ ಹೊರತು ಒತ್ತಡದಲ್ಲಿ ಪ್ರಭಾವ ಬೀರುವಂತೆ ಮಾಡಬಾರದು ಎಂದು ಕೂಡ ಹೇಳಿದರು.
ಎಐಎಡಿಎಂಕೆ ಒ.ಪನ್ನೀರ್ ಸೆಲ್ವಂ ಬಣ ಮತ್ತು ಶಶಿಕಲಾ ಬಣ ಎಂದು ಇಬ್ಭಾಗವಾಗುತ್ತದೆ ಎಂಬ ಊಹಾಪೋಹಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಕನ್ನಿಮೋಳಿ ಈ ಪ್ರತಿಕ್ರಿಯೆ ನೀಡಿದ್ದಾರೆ. 
ತಮಿಳು ನಾಡಿನ ಮುಖ್ಯಮಂತ್ರಿ ಯಾರಾಗಬೇಕೆಂಬ ಅಂತಿಮ ನಿರ್ಧಾರವನ್ನು ಮುಂದಿನ ಎರಡು ದಿನಗಳಲ್ಲಿ ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ತೆಗೆದುಕೊಳ್ಳುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com