ಸೈನಿಕ ತೇಜ್ ಬಹದ್ದೂರ್ ನಾಪತ್ತೆ ಪ್ರಕರಣ : ಹೇಬಿಯಸ್ ಕಾರ್ಪಸ್ ಸಲ್ಲಿಸಿದ ಕುಟುಂಬಸ್ಥರು

ಗಡಿ ಭದ್ರತಾ ಪಡೆ ಯೋಧ ತೇಜ್ ಬಹದ್ದೂರ್ ಯಾದವ್ ನಾಪತ್ತೆ ಪ್ರಕರಣ ಸಂಬಂಧ ಆತನ ಕುಟುಂಬಸ್ಥರು ದೆಹಲಿ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ...
ತೇಜ್ ಬಹದ್ದೂರ್ ಯಾದವ್
ತೇಜ್ ಬಹದ್ದೂರ್ ಯಾದವ್

ನವದೆಹಲಿ: ಗಡಿ ಭದ್ರತಾ ಪಡೆ ಯೋಧ ತೇಜ್ ಬಹದ್ದೂರ್ ಯಾದವ್ ನಾಪತ್ತೆ ಪ್ರಕರಣ ಸಂಬಂಧ ಆತನ ಕುಟುಂಬಸ್ಥರು ದೆಹಲಿ ಹೈಕೋರ್ಟ್ ನಲ್ಲಿ  ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.

ಭಾರತೀಯ ಸೈನಿಕರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಯಾದವ್ ಫೇಸ್ ಬುಕ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ ನಂತರ ತೇಜ್ ಬಹದ್ದೂರ್ ವಿರುದ್ಧ ಬಿಎಸ್ ಎಫ್ ತನಿಖೆಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಯಾದವ್ ಸಂಪರ್ಕಕ್ಕೆ ಸಿಗುತ್ತಿಲ್ಲ ಅವರನ್ನು ಹುಡುಕಿ ಕೊಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ.

ಎರಡು ದಿನಗಳ ಹಿಂದೆ ಯಾದವ್ ಪತ್ನಿ ಶರ್ಮಿಳಾ ಯಾದವ್ ಮತ್ತು ಆಕೆಯ ಹಿರಿಯ ಸಹೋದರ ಅರೆ ಸೇನಾ ಪಡೆ ಸಂಘದ ಪ್ರಧಾನ ಕಾರ್ಯದರ್ಶಿ ರಣಬೀರ್ ಸಿಂಗ್ ಅವರನ್ನು ಭೇಟಿ ಮಾಡಿ ನ್ಯಾಯಯುತ ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಎಸ್ ಎಫ್ ಡಿಜಿ ಕಾನೂನು ಪ್ರಕಾರ ತನಿಖೆ ನಡೆಸುವ ಭರವಸೆ ನೀಡಿದ್ದರು.

ತೇಜ್ ಬಹದ್ದೂರ್ ಯಾದವ್ ಸಲ್ಲಿಸಿದ್ದ ಸ್ವಯಂ ನಿವೃತ್ತಿ ಅರ್ಜಿಯನ್ನು ಬಿಎಸ್ ಎಫ್ ತಿರಸ್ಕರಿಸಿತ್ತು. ತೇಜ್ ಬಹದ್ದೂರ್ ಅವರನ್ನು ಬಂಧಿಸಿರುವ ಬಿಎಸ್ ಎಫ್ ಅವರಿಗೆ ಮಾನಸಿಕ ಕಿರುಕುಳ ನೀಡಿ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಯಾದವ್ ಕುಟುಂಬಸ್ಥರು ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com